ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಗೌತಮ್ ಅದಾನಿ ಭಾರತದ ನಂಬರ್ 1 ಶ್ರೀಮಂತ!
ಹೌದು, ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ದೇಶದ ನಂಬರ್ 1 ಶ್ರೀಮಂತ ಎಂದೆನಿಸಿಕೊಂಡಿದ್ದಾರೆ.
ವಿಶ್ವದ ಶ್ರೀಮಂತರ ಪಟ್ಟಿ ಸಿದ್ಧಪಡಿಸುವ ಬ್ಲೂಮ್‌ಬರ್ಗ್ ಲಿಸ್ಟ್ ಅನ್ವಯ ಗೌತಮ್ ಅದಾನಿ ನಿವ್ವಳ ಸಂಪತ್ತು 97.6 ಬಿಲಿಯನ್ ಡಾಲರ್ ಆಗಿದೆ. ಅಂಬಾನಿ ಆಸ್ತಿ ಒಟ್ಟು 97 ಬಿಲಿಯನ್ ಡಾಲರ್ ಎನ್ನಲಾಗಿದೆ.
ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 12 ನೇ ಸ್ಥಾನವನ್ನು ಅಲಂಕರಿಸಿದ್ದು, ಅಂಬಾನಿ 13 ನೇ ಸ್ಥಾನಕ್ಕೆ ಇಳಿದಿದ್ದಾರೆ. 220 ಬಿಲಿಯನ್ ಡಾಲರ್‌ನೊಂದಿಗೆ ಎಲಾನ್ ಮಸ್ಕ್ ಅಗ್ರಸ್ಥಾನದಲ್ಲಿದ್ದಾರೆ.