ಹೊಸದಿಗಂತ ವರದಿ ಬಾಗಲಕೋಟೆ :
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಹೆಲ್ಮೆಟ್ ಕಡ್ಡಾಯ ಜಾಗೃತಿ ಅಭಿಯಾನ ನಡೆಯಿತು.
ನವನಗರದಿಂದ ಆರಂಭಗೊಂಡ ಜನಜಾಗೃತಿ ಅಭಿಯಾನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು
ಎಸ್ಪಿ ಅಮರನಾಥ ರೆಡ್ಡಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷದಠಾಧಿಕಾರಿ ದೇಸಾಯಿಯವರು ಹೆಲ್ಮೆಟ್ ಹಾಕಿ ಬೈಕ ಓಡಿಸುವ ಮೂಲಕ ಹೆಲ್ಮೆಟ್ ಕಡ್ಡಾಯ ಜಾಗೃತಿ ಮೂಡಿಸಿದರು.
ಪೊಲೀಸರಿಂದ ಬೈಕ್ ಜಾಥಾ ಅಭಿಯಾನ ನಡೆಯಿತು. ಪೊಲೀಸರಿಂದ ಬೈಕ್ ಜಾಥಾ ನವನಗರ, ವಿದ್ಯಾಗಿರಿ ಮತ್ತು ಹಳೇ ಬಾಗಲಕೋಟೆಯಲ್ಲಿ ಬೈಕ್ ರ್ಯಾಲಿ ಮುಗಿಸಿ ಹೊಳೆ ಆಂಜನೇಯ ಗುಡಿವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸವಾರ ಮತ್ತು ಹಿಂಬದಿಯ ಸವಾರ ಕಡ್ಡಾಯ ಹೆಲ್ಮೆಟ್ ಧರಿಸಬೇಕು. ಈಗಾಗಲೇ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದು.ಪ್ರತಿಯೊಬ್ಬ ವಾಹನ ಸವಾರರು ಹೆಲ್ಮೆಟ್ ಬಳಕೆ ಮಾಡುವ ಮೂಲಕ ತಮ್ಮ ಅಮೂಲ್ಯವಾದ ಜೀವವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ತಮ್ಮ ಕುಟುಂಭದ ಭದ್ರತೆ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು .