ಹೊಸದಿಗಂತ ವರದಿ,ಗೋಕರ್ಣ:
ಭಾರತ ಸರ್ಕಾರದ ಕೌಶಲ್ಯ ಮತ್ತು ಅಭಿವೃದ್ಧಿ ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಶುಕ್ರವಾರ ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ದೇವಾಲಯ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು.
ವೇ.ಮಹಾಬಲ ಉಪಾಧ್ಯ ಪೂಜಾ ಕೈಂಕರ್ಯ ನೆರವೇರಿಸಿದರು.ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.೧೯೯೮ ರ ಅವಧಿಯಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿಯಾಗಿ ಇವರು ಕಾರ್ಯನಿರ್ವಹಿಸಿದ್ದರು.
ಈ ವೇಳೆ ಕುಮಟಾ ತಹಶೀಲ್ದಾರ್ ಪ್ರವೀಣ್ ಕರಾಂಡೆ, ಗ್ರೇಡ್೨ ತಹಶೀಲ್ದಾರ ಸತೀಶ ಗೌಡ, ಜಿಲ್ಲಾ ಸಾಂಕಿಕ ಅಧಿಕಾರಿ ಸೋಮಶೇಖರ,ಕಂದಾಯ ನಿರೀಕ್ಷಕ ಸಂತೋಷ್ ಶೇಟ್, ಗ್ರಾಮ ಲೆಕ್ಕಾಧಿಕಾರಿ ಮಂಜಪ್ಪ,ದೇವಾಲಯದ ವ್ಯವಸ್ಥಾಪಕ ಸುಬ್ರಮಣ್ಯ ಹೆಗಡೆ ,ವೇ ದತ್ತಾತ್ರೇಯ ಹಿರೆಗಂಗೆ,ಮತ್ತಿತರರು ಉಪಸ್ಥಿತರಿದ್ದರು.