ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಕುತೂಹಲ ಕೆರಳಿಸಿರುವ ಜ್ಞಾನವಾಪಿ ಸಂಕೀರ್ಣದ ಭಾರತೀಯ ಪುರಾತತ್ವ ಇಲಾಖೆ ವೈಜ್ಞಾನಿಕ ಸರ್ವೇ ವರದಿ ಬಹಿರಂಗ ಪಡಿಸುವ ದಿನಾಂಕವನ್ನು ವಾರಾಣಸಿ ನ್ಯಾಯಾಲಯ ಇಂದು (ಜ.6) ಪ್ರಕಟಿಸಲಿದೆ.
ಅರ್ಜಿ ಕುರಿತಾದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ ಅವರು ಶುಕ್ರವಾರ ಆರಂಭಿಸಿದರಾದರೂ ಬೆರಳಚ್ಚು ಮಾಡದ ಕಾರಣ, ಆದೇಶವನ್ನು ಶನಿವಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.
ಸರ್ವೇ ವರದಿಯನ್ನು ಕಳೆದ ತಿಂಗಳಿನಲ್ಲಿಯೇ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಸಂದರ್ಭ ವರದಿಯನ್ನು ಕನಿಷ್ಠ ನಾಲ್ಕು ವಾರಗಳ ಕಾಲ ಬಹಿರಂಗಪಡಿಸದಂತೆ ಕೂಡಾ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
ಮೊಘಲ್ ದೊರೆ ಔರಂಗಜೇಬ್ ಕಾಲದಲ್ಲಿ ಇಲ್ಲಿನ ದೇವಸ್ಥಾನದ ಒಂದು ಭಾಗ ಧ್ವಂಸಗೊಳಿಸಿ ಆ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಹಿಂದು ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಔರಂಗಜೇಬ್‌ನ ಆಡಳಿತ ಅವಧಿಗಿಂತ ಮೊದಲೂ ಇಲ್ಲಿ ಮಸೀದಿ ಇತ್ತು ಎಂದು ಮುಸ್ಲಿಂ ಅರ್ಜಿದಾರರು ಪ್ರತಿಪಾದಿಸಿದ್ದರು. ಹೀಗಾಗಿ ನ್ಯಾಯಾಲಯ ಜು.21ರಂದು ಇಲ್ಲಿ ವೈಜ್ಞಾನಿಕ ಸರ್ವೆಗೆ ಆದೇಶಿಸಿತ್ತು.