ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೃಗಾಲಯದಲ್ಲಿರುವ ಅತ್ಯಂತ ಹಿರಿಯ ಗಂಡು ಕರಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಬ್ಲೂ ಇನ್ನಿಲ್ಲ.
ಹೌದು, ಭೋಪಾಲ್‌ನ ವನವಿಹಾರ ರಾಷ್ಟ್ರೀಯ ಉದ್ಯಾನ ಹಾಗೂ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿದ್ದ ಈ ಹಿರಿಯ ಶುಕ್ರವಾರ ಇಹಲೋಕ ತ್ಯಜಿಸಿದ್ದಾನೆ. ಈತನಿಗೆ 36 ವರ್ಷ ವಯಸ್ಸಾಗಿತ್ತು.
ಮೂಲಗಳ ಮಾಹಿತಿ ಪ್ರಕಾರ ಬಬ್ಲೂ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ. ಜೊತೆಗೆ ಆರೋಗ್ಯ ಸಮಸ್ಯೆ ತೀವ್ರವಾಗಿದ್ದ ಕಾರಣ ಕಳೆದ ಕೆಲವು ದಿನಗಳಿಂದ ಈತ ಆಹಾರ ಸೇವನೆಯನ್ನೂ ತ್ಯಜಿಸಿದ್ದ.
2006ರಲ್ಲಿ ಬಬ್ಲೂಗೆ 19 ವರ್ಷ ಇದ್ದಾಗ ರಾಜಸ್ಥಾನದ ಗ್ರಾಮವೊಂದರಲ್ಲಿ ಕರಡಿ ಕುಣಿಸುವವರಿಂದ ರಕ್ಷಿಸಿ ಇಲ್ಲಿನ ವನ ವಿಹಾರ ಕರಡಿಧಾಮಕ್ಕೆ ಕರೆತರಲಾಗಿತ್ತು.
ಬಬ್ಲೂವಿನ ಮೃತದೇಹವನ್ನು ಅಧ್ಯಯನ ದೃಷ್ಟಿಯಿಂದ ಜಬಲ್ಪುರದ ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಪಶುಚಿಕಿತ್ಸಕ ಡಾ. ಅತುಲ್ ಗುಪ್ತಾ ತಿಳಿಸಿದ್ದಾರೆ.