ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ ಜನ್ಮಭೂಮಿ ಕುರಿತ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ ಪೂಜಾರಿಯನ್ನು 31 ವರ್ಷಗಳ ನಂತರ ರಾಮ ಮಂದಿರ ಉದ್ಘಾಟನೆಗೆ ವೇಳೆಗೆ ಕಾಂಗ್ರೆಸ್ ಸರ್ಕಾರ ಬಂಧಿಸಿ ಜೈಲಿಗಟ್ಟಿತ್ತು. ಒಂದು ವಾರಗಳ ಕಾಲ ಜೈಲಿನಲ್ಲಿದ್ದ ಶ್ರೀಕಾಂತ ಪೂಜಾರಿ ಅವರಿಗೆ ನಿನ್ನೆ ಜಾಮೀನು ಲಭ್ಯವಾಗಿದ್ದು, ಇಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಯಾಗಿ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಕಾಂತ ಪೂಜಾರಿ ಅವರು, ಹುಬ್ಬಳ್ಳಿಯ ಪೊಲೀಸರು ಮಾರ್ಕೆಟ್‌ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಡಿ.29ರಂದು ನನ್ನನ್ನು ಬರಲು ಹೇಳಿದರು. ನಾನು ಬೆಳಗಾವಿಯಲ್ಲಿದ್ದವನು ಬಂದು ಪೊಲೀಸರನ್ನು ಭೇಟಿಯಾದಾಗ ಮಾರುಕಟ್ಟೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ನನಗೆ ಯಾವುದೇ ನೋಟಿಸ್ ಅಥವಾ ಸಮನ್ಸ್ ಕೂಡ ನೀಡದೇ ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದರು.
ನನ್ನ ಮೇಲೆ ಯಾವುದೇ ಕೇಸ್‌ಗಳಿಲ್ಲ ಎಂದು ಹೇಳಿದರೂ ಕೇಳಿದರೇ ನಿಂದು ಜಾಸ್ತಿ ಆಗಿದೆ ಮಗನಾ ಜೈಲಿಗೆ ನಡಿ ಎಂದು ಬಂಧಿಸಿದ್ದಾರೆ. ನನ್ನ ಮೇಲಿರುವ ಎಲ್ಲ ಕೇಸ್‌ಗಳು ಖುಲಾಸೆ ಮಾಡಿಕೊಂಡೇ ನಾನು ಜೈಲಿನಿಂದ ಹೊರಗಿದ್ದೇನೆ. ಆದರೆ, ಈ ಕೇಸನ್ನು ಮುಂದಿಟ್ಟುಕೊಂಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾನು ಜೈಲಿಗೆ ಹೋದ ನಂತರ ಬಿಜೆಪಿ ನಾಯಕರು, ಮುಖಂಡರು, ಹಿಂದೂ ಸಂಘನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿ ಬಿಡುಗಡೆಗೆ ಆಗ್ರಹಿಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಇನ್ನು ಜ.22ರಂದು ನಡೆಯುವ ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೂ ನಾನು ಹೋಗುತ್ತೇನೆ ಎಂದು ತಿಳಿಸಿದರು.