ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಪರಿಸರದಲ್ಲಿ ಕಾಡಾನೆ ಹಾವಳಿ ಮಿತಿಮೀರಿರುವ ಬಗ್ಗೆ ಕೃಷಿಕರು ದೂರಿದ್ದಾರೆ.
ಇಲ್ಲಿನ ಪಂಜಿಕಲ್ಲು, ಮುರೂರು, ಬೆಳ್ಳಿಪ್ಪಾಡಿ ಭಾಗದಲ್ಲಿ ಒಂಟಿ ಸಲಗವೊಂದು ಕೃಷಿಕರ ತೋಟಕ್ಕೆ ನುಗ್ಗಿ ಹಾನಿ ಉಂಟುಮಾಡುತ್ತಿದೆ. ಇದೇ ಸಲಗವು ಪಕ್ಕದ ಕನಕಮಜಲು ದೇರ್ಕಜೆ, ಕುಧ್ಕುಳಿ, ಕಾಪಿಲ, ಮುಗೇರು , ಪೆರ್ನಾಜೆ, ಪೆರ್ಲಂಪಾಡಿ, ಕೊಳ್ತಿಗೆ ಮೂಲಕ ಇದೀಗ ಕೆಮನಬಳ್ಳಿಗೆ ತಲುಪಿದ್ದು, ಅಲ್ಲಿ ಕೂಡಾ ಕೃಷಿಕರ ನಿದ್ದೆಗೆಡಿಸುತ್ತಿದೆ. ಕೆಮನಬಳ್ಳಿ ಫಾಲ್ಸ್ ಪಕ್ಕದ ಕಾಡಿನಲ್ಲಿ ಮೊಕ್ಕಾಂ ಹೂಡಿರುವ ಈ ಆನೆ, ರಾತ್ರಿಯಾಗುತ್ತಿದ್ದಂತೆಯೇ ಕೃಷಿ ಭೂಮಿಗಳಿಗೆ ದಾಳಿ ನಡೆಸುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ