ಬೆಳಗಾವಿ ನೀತಾ ಮುಡಿಗೆ ಮಿಸೆಸ್ ಏಷಿಯಾ ಸೂಪರ್ ಮಾಡೆಲ್ ಕಿರಿಟ್!

ಹೊಸದಿಗಂತ ವರದಿ, ಬೆಳಗಾವಿ:

ನಗರದ ಯುವ ಪ್ರತಿಭೆ ನೀತಾ ಸಂತೋಷ ಶಿರಗಾಂವಕರ್ ಅವರು ದೆಹಲಿ ನೋಯ್ಡಾದಲ್ಲಿ ಈಚೆಗೆ ನಡೆದ ಮಿಸಸ್ ಏಷಿಯಾ ಸೂಪರ್ ಮಾಡಲ್-2023ರ ಕಿರಿಟ್ ವನ್ನು ಮುಡಿಗೇರಿಸಿಕೊಂಡಿದ್ದಾರೆ.

ಶರತ್ ಚೌಧರಿ ಅವರ ಡ್ರೀಮ್ ಪ್ರೊಡಕ್ಸನ್ ಹೌಸ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ದೇಶ ವಿದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದುಬೈ, ದೆಹಲಿ, ಮುಂಬೈ, ಪಂಜಾಬ್, ಜಮ್ಮು ಕಾಶ್ಮೀರ, ಜೈಪುರ, ಚಂಡೀಗಢ, ಆಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಮಾಡಲ್ ಗಳು ಭಾಗವಹಿಸಿದ್ದರು.

ಮಿಸಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲಾ ವಿನ್ನರ್ ಮತ್ತು ಬೆಸ್ಟ್ ಸ್ಕಿನ್ ಟೈಟಲ್ ಮತ್ತು ಮಿಸಸ್ ಇಂಡಿಯಾ ಯುನಿವರ್ಸಲ್ ಸ್ಪರ್ಧೆಯಲ್ಲಿ ಮಿಸಸ್ ಬ್ಯೂಟಿಫುಲ್ ಬಾಡಿ ಪ್ರಶಸ್ತಿಗಳನ್ನು ಈಗಾಗಲೇ ಪಡೆದುಕೊಂಡಿರುವ ನೀತಾ ಶಿರಗಾಂವಕರ್ ಅವರಿಗೆ ಪತಿ ಸಂತೋಷ ಹಾಗೂ ಇಡೀ ಕುಟುಂಬ ಬೆಂಬಲವಾಗಿ ನಿಂತಿರುವುದು ವಿಶೇಷ.

ನೋಯ್ಡಾದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಬಾಲಿವುಡ ನಟರಾದ ಪ್ರಿನ್ಸ್ ನರೂಲಾ, ರೋಹಿತ್ ಶರ್ಮಾ ಖಂಡೇಲವಾಲ್ ಮತ್ತಿತರರು ಉಪಸ್ಥಿತರಿದ್ದರು.

ನೀತಾ ಅವರ ಪತಿ ಸಂತೋಷ ಬೆಳಗಾವಿಯ ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ನಿಗೆ ಸಂಪೂರ್ಣ ಸಹಕಾರ ನೀಡಿದ್ದು, ಅಂತಾರಾಷ್ಟ್ರೀಯ ಪ್ರಶಸ್ತಿಯ ಜಯದ ಮಾಲೆ ಧರಿಸಲು ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here