ಹೊಸದಿಗಂತ ವರದಿ, ಬಾಗಲಕೋಟೆ
ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಕೋಟೆ ನಗರಿಯಲ್ಲಿ ರಾಷ್ಟ್ರಸೇವಿಕಾ ಸಮಿತಿಯಿಂದ ಪಥಸಂಚಲನ ನಡೆಯಿತು.
ನಗರದ ಬಿವ್ಹಿವ್ಹಿ ಸಂಘದ ಕಾಲೇಜ್ ಮೈದಾನದಿಂದ ಎರಡು ಮಾರ್ಗದಲ್ಲಿ ಆರಂಭಗೊಂಡ ಪಥಸಂಚಲನ ನಗರದಲ್ಲಿ ಸಂಚರಿಸಿ ಬಸವೇಶ್ವರ ವೃತ್ತದ ಬಳಿ ಎರಡೂ ಮಾರ್ಗದಪಥ ಸಂಚಲನ ಸಮಾಗಮಗೊಂಡಾಗ ನೆರೆದ ಜನರಲ್ಲಿ ದೇಶಾಭಿಮಾನ ಮೂಡಿತು.ಕೇಕೆ ಚಪ್ಪಾಳೆ, ಜೈ ಭವಾನಿ, ವೀರಶಿವಾಜಿ ಅಂಬಾಭವಾನಿ ಎಂಬ ಘೋಷಣೆಗಳು ಮೊಳಗಿದವು.