ಹೊಸದಿಗಂತ, ಡಿಜಿಟಲ್ ಡೆಸ್ಕ್:
ಕಳೆದುಹೋದ ವಸ್ತುಗಳನ್ನು ಹುಡುಕಲು ಜನರು ಪೊಲೀಸರು, ಕವಡೆ ಶಾಸ್ತ್ರ, ದೈವ ದೇವರುಗಳ ಮೊರೆ ಹೋಗುವುದು ಕೇಳಿದ್ದೇವೆ, ಆದರೆ ಇಲ್ಲೊಬ್ಬರು ಕಳೆದುಕೊಂಡ ತನ್ನ ಏರ್‌ಪಾಡ್ ಹುಡುಕಿಕೊಡಲು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಅಚ್ಚರಿ ಎಂದರೆ ಅವರು ಅದನ್ನು ಹುಡುಕಿ ಮರಳಿ ಪಡೆಯುವಲ್ಲಿ ಯಶಸ್ವಿಯೂ ಆಗಿದ್ದಾರೆ!
ಮುಂಬೈ ನಿವಾಸಿ ನಿಖಿಲ್ ಎಂಬವರು ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ತಮ್ಮ ಏರ್‌ಪಾಡ್ ಕಳೆದುಕೊಂಡಿದ್ದರು. ಇದನ್ನು ಅವರು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಎರಡು ದಿನಗಳ ಹಿಂದೆ ಕೇರಳದಲ್ಲಿ ಏರ್‌ಪಾಡ್ ಕಳೆದುಕೊಂಡಿದ್ದೇನೆ. ದಕ್ಷಿಣ ಗೋವಾದ ಸಾಲ್ಸೆಟೆಯ ಡಾ. ಅಲ್ವಾರೊ ಡಿ ಲೊಯೊಲಾ ಫುರ್ಟಾಡೊ ರಸ್ತೆಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಅದೇ ಏರ್‌ಪಾಡ್‌ನೊಂದಿಗೆ ಕಳೆದ ಎರಡು ದಿನಗಳಿಂದ ಸಂಚರಿಸುತ್ತಿದ್ದಾನೆ. ಅದನ್ನು ವಾಪಸ್ ಪಡೆಯಲು ಸಹಾಯ ಮಾಡಿ ಎಂದು ಬರೆದುಕೊಂಡಿದ್ದರು.
ಈ ಮಾಹಿತಿಯನ್ನು ಬೆನ್ನತ್ತಿದ ಪೊಲೀಸರು ಏರ್‌ಪಾಡ್ ಹಿಂದೆಬಿದ್ದಿದ್ದು, ನಿಖಿಲ್‌ಗೆ ಏರ್‌ಪಾಡ್ ವಾಪಸ್ ಕೊಡಿಸುವಲ್ಲಿ ಯಶ್ಸವಿಯಾಗಿದ್ದಾರೆ. ಹುಡುಕಿಕೊಟ್ಟ ಪೊಲೀಸರಿಗೆ ನಿಖಿಲ್ ಧನ್ಯವಾದ ಹೇಳಿದ್ದಾರೆ.