ಹೊಸದಿಗಂತ ವರದಿ ಹಾವೇರಿ :
ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಒಂದೂವರೆ ತಿಂಗಳು ಕಳೆದರೂ ಕಬ್ಬಿನ ಬಿಲ್ ಪಾವತಿ ಮಾಡದ ಸಂಗೂರಿನ ಜಿ.ಎಂ. ಶುಗರ್ಸ್ ಕ್ರಮ ಖಂಡಿಸಿ ಜಿಲ್ಲೆಯ ಕಬ್ಬು ಬೆಳೆಗಾರರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಈ ಕುರಿತು ಕಳೆ ನಾಲ್ಕಾರು ದಿನಗಳಿಂದ ಎಚ್ಚರಿಸಿದ್ದರೂ ಸಹ ಸ್ಪಂದಿಸದ ಜಿ.ಎಂ. ಶುಗರ್ಸ್ ಆಡಳಿತ ಮಂಡಳಿ ವಿರುದ್ದ ಘೋಷಣೆ ಕೂಗಿ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಬಾಕಿ ಬಿಲ್ ಕೂಡಲೇ ಪಾವತಿಸುವಂತೆ ಒತ್ತಾಯಿಸಿದ ನೂರಾರು ರೈತರು ಹಾವೇರಿ – ಹಾನಗಲ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಕಾರ್ಖಾನೆ ಮುಂದಿರೋ ರಾಜ್ಯ ಹೆದ್ದಾರಿ ತಡೆದು ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬು ಸಾಗಿಸಿ 45 ದಿನ ಕಳೆದರೂ ಬಿಲ್ ಪಾವತಿ ಮಾಡದ ಕಾರ್ಖಾನೆ ಮಾಲೀಕರು, ಕಬ್ಬು ಸಾಗಿಸಿದ ರೈತರಿಗೆ 50 ಕೋಟಿಗೂ ಹೆಚ್ಚಿನ ಹಣ ಬಾಕಿ ಕೊಡುವುದು ಇದೆ ಕೂಡಲೇ ಪಾವತಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರ ರೈತ ಸಂಘದ ಜಿಲ್ಲಾದ್ಯಕ್ಷ ಭುವನೇಶ್ವರ ಶಿಡ್ಲಾಪುರ ಸೇರಿದಂತೆ ಹಲವರು ಇದ್ದರು.