#BoycottMaldives । ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ತಿರುಗೇಟು ಕೊಟ್ಟ ಕ್ರಿಕೆಟಿಗ ಸೆಹ್ವಾಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಕ್ಕೆಖ್ಯಾತೆ ತೆಗೆದ ಮಾಲ್ಡೀವ್ಸ್ ಗೆ ದೇಶವಾಸಿಗಳು ಒಂದಲ್ಲ ಒಂದು ರೀತಿಯಲ್ಲಿ ತಿರುಗೇಟು ನೀಡುತ್ತಿದ್ದು, ಬಾಲಿವುಡ್ ಸೆಲೆಬ್ರೆಟಿಗಳು, ಕ್ರಿಕೆಟಿಗರು ಹಾಗೂ ಬಹುತೇಕ ಭಾರತೀಯರು ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕರೆ ನೀಡಿದ್ದಾರೆ.

ಭಾರತದ ಅತ್ಯಂತ ಸುಂದರ ತಾಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ಸೇರಿದಂತೆ ಹಲವು ಪ್ರವಾಸಿ ತಾಣಗಳ ಕುರಿತು ಸೆಲೆಬ್ರೆಟಿಗಳು ಟ್ವೀಟ್ ಮಾಡಿದ್ದಾರೆ. ಇದೀಗ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕರ್ನಾಟಕದ ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ್ದಾರೆ.

ಭಾರತ ಹಾಗೂ ಪ್ರಧಾನಿ ಮೋದಿ ನಿಂದಿಸಿದ ಮಾಲ್ಡೀವ್ಸ್ ಸಚಿವರು ಹಾಗೂ ಮಾಲ್ಡೀವ್ಸ್ ಸರ್ಕಾರದ ವಿರುದ್ದ ಆಕ್ರೋಶ ತೀವ್ರಗೊಳ್ಳುತ್ತಿದೆ. ಇತ್ತ ಮಾಲ್ಡೀವ್ಸ್ ಮಾಜಿ ಅಧ್ಯಕ್ಷರು, ಪ್ರತಿ ಪಕ್ಷಗಳ ಸದಸ್ಯರು ಭಾರತೀಯರ ಬಳಿ ಕ್ಷಮೆಯಾಚಿಸುವಂತೆ ಮಾಲ್ಡೀವ್ಸ್ ಸರ್ಕಾರವನ್ನು ಆಗ್ರಹಿಸಿದೆ. ಇತ್ತ ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭಿಸಿದ್ದಾರೆ. ಇತ್ತ ವಿರೇಂದ್ರ ಸೆಹ್ವಾಗ್ ಭಾರತದ ಮೂರು ತಾಣಗಳ ಸುಂದರ ಬೀಚ್ ಕುರಿತು ಫೋಟೋ ಹಂಚಿಕೊಂಡಿದ್ದಾರೆ.

ಉಡುಪಿಯ ತ್ರಾಸಿ ಬೀಚ್, ಪಾಂಡಿಚೇರಿಯ ಪ್ಯಾರಡೈಸ್ ಬೀಚ್, ಅಂಡಮಾನ್ ನಿಕೋಬಾರ್‌ನ ನೈಲ್ ಹಾಗೂ ಹ್ಯಾವ್ಲಾಕ್ ಬೀಚ್ ಫೋಟೋಗಳನ್ನು ಸೆಹ್ವಾಗ್ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಹಲವರು ಅನ್ವೇಷಿಸಿದ ಸ್ಥಳಗಳಿವೆ. ಈ ತಾಣಗಳಿಗೆ ಮೂಲಸೌಕರ್ಯ ಒದಗಿಸಿದರೆ ಯಾವುದಕ್ಕೂ ಕಡಿಮೆ ಇಲ್ಲ. ಪರಿಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸುವುದು ಭಾರತಕ್ಕೆ ತಿಳಿದಿದೆ. ಮಾಲ್ಡೀವ್ಸ್ ಸಚಿವರು ಭಾರತ ಹಾಗೂ ಪ್ರಧಾನ ಮಂತ್ರಿಯನ್ನು ನಿಂದಿಸಿರುವ ಈ ಸಂದರ್ಭವನ್ನು ಉತ್ತಮ ಅವಕಾಶವಾಗಿ ಬಳಸಿಕೊಂಡು ನಮ್ಮ ಸುಂದರ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ ನೀಡಿ ಆರ್ಥಿಕತೆಯ ವೇಗ ಹೆಚ್ಚಿಸಬೇಕಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಇಷ್ಟೇ ಅಲ್ಲ ಸೆಹ್ವಾಗ್ ಉಡುಪಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಉಡುಪಿ ನಿಜಕ್ಕೂ ಅದ್ಭುತ.ಅತ್ಯಂತ ಸುಂದರ ಕಡಲತೀರ, ಪ್ರಾಚೀನ ದೇವಾಲಯ ಹಾಗೂ ಅತ್ಯುತ್ತಮ ಆಹಾರದಿಂದ ಉಡುಪಿ ಅಚ್ಚುಮೆಚ್ಚು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!