ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯವಾದ ದೇವಾಲಯ ನಿರ್ಮಾಣವಾಗುತ್ತಿದ್ದು,ಜನವರಿ 22 ರಂದು ರಾಮಲಲಾ ಪ್ರತಿಷ್ಠಾಪನೆ ನಡೆಯಲಿದೆ.
ಪ್ರಪಂಚದಾದ್ಯಂತ ಇರುವ ಕೋಟ್ಯಾಂತರ ರಾಮಭಕ್ತರು ರಾಮಲಲಾನನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ದೇಗುಲದ ಉದ್ಘಾಟನೆಗೆ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಗರ್ಭಗುಡಿಯಿಂದ ನೆಲಮಹಡಿಯವರೆಗೆ ಬಹುತೇಕ ಸಿದ್ಧಗೊಂಡಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾಲಕಾಲಕ್ಕೆ ದೇವಾಲಯದ ಛಾಯಾಚಿತ್ರಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಟ್ರಸ್ಟ್ನಿಂದ ಹೊಸದಾಗಿ ಬಿಡುಗಡೆಯಾದ ಛಾಯಾಚಿತ್ರಗಳು ರಾತ್ರಿಯಲ್ಲಿ ದೇವಾಲಯವು ಎಷ್ಟು ಭವ್ಯವಾಗಿ ಕಾಣುತ್ತದೆ ಎಂಬುದನ್ನು ತೋರಿಸಿದೆ.
ದೇವಾಲಯದ ನಾಲ್ಕು ಹೊಸ ಫೋಟೋಗಳನ್ನು ಟ್ರಸ್ಟ್ ಬಿಡುಗಡೆ ಮಾಡಿದೆ.
ಮೊದಲನೆಯ ಫೋಟೋದಲ್ಲಿ ದೇವಾಲಯದ ಒಳಗಿನ ನೋಟವು ಆಕರ್ಷಕವಾಗಿದೆ. ಭಕ್ತರ ಕಲ್ಪನೆಯಂತೆ ದೇವಾಲಯವು ದೈವಿಕ ಮತ್ತು ಭವ್ಯವಾಗಿರುತ್ತದೆ ಎಂದು ತೋರುತ್ತದೆ. ಎರಡನೆಯ ಫೋಟೋದಲ್ಲಿ ರಾಮಮಂದಿರದ ರಾತ್ರಿಯ ನೋಟ, ಮೂರನೆಯ ಫೋಟೋದಲ್ಲಿ ದೇವಾಲಯದ ಒಳಗಿನ ಭವ್ಯವಾದ ಕೆತ್ತನೆಗಳು, ನಾಲ್ಕನೆಯ ಫೋಟೋದಲ್ಲಿ ದೇವಾಲಯ ಸಂಕೀರ್ಣದ ನೋಟ ಹಾಗೂ ಸಂಕೀರ್ಣದಲ್ಲಿನ ಆಕರ್ಷಕ ಶಿಲ್ಪಗಳನ್ನು ಕಣ್ತುಂಬಿಕೊಳ್ಳಬಹುದು.