ದಿನಭವಿಷ್ಯ : ಹೆಚ್ಚು ಯೋಚನೆ ಮಾಡದೆ ಬೇರೆಯವರಿಗೆ ಸಹಾಯ ಮಾಡ್ತೀರಿ, ಇದನ್ನು ಭಗವಂತ ಮೆಚ್ತಾನೆ ಖಂಡಿತ!

ಮೇಷ
ಬದುಕೆಂದ ಮೇಲೆ  ಸುಂದರ ಮತ್ತು ಕೆಟ್ಟ ಅನುಭವ ಇದ್ದದ್ದೇ. ಕೆಟ್ಟ ಅನುಭವ ಮರೆಯಿರಿ.  ಎಲ್ಲರೊಡನೆ ಬೆರೆತು ಆನಂದಿಸಲು ಕಲಿಯಿರಿ. ಹರ್ಷ ಚಿತ್ತರಾಗಿರಿ.

ವೃಷಭ
ಶಾಂತ ಮನಸ್ಥಿತಿ. ಮನಸ್ಸು ಕೆಡಿಸುವ ಬೆಳವಣಿಗೆ ಸಂಭವಿಸದು. ಗೊಂದಲ ಪರಿಹಾರ. ಕೆಟ್ಟಿರುವ ಸಂಬಂಧದಲ್ಲಿ ಸುಧಾರಣೆ.

ಮಿಥುನ
ಪ್ರತಿಕೂಲ ಬೆಳವಣಿಗೆ ಸಂಭವಿಸಿದರೂ ಅದರಿಂದ ಬೇಸರ ಪಡದಿರಿ. ಒಳಿತು ಅದರ ಬೆನ್ನಿಗೇ ಬರಲಿದೆ. ಕಾಯುವ ತಾಳ್ಮೆ ಬೇಕಾಗಿದೆ.

ಕಟಕ
ನಕಾರಾತ್ಮಕ ಚಿಂತನೆಗಳಿಂದ ಮನಸ್ಸು ಮುಕ್ತವಾಗುವುದು. ಹಾಗಾಗಿ ನಿಮ್ಮ ಕ್ಲೇಶ ಪರಿಹಾರ. ಇದ್ದುದರಲ್ಲೆ ಖುಷಿ ಕಾಣಲು ಪ್ರಯತ್ನಿಸಿರಿ.

ಸಿಂಹ
ಭಾವನೆ ನಿಯಂತ್ರಿಸಿ. ಕೋಪತಾಪ ಏರಿಸುವ ಬೆಳವಣಿಗೆ ಸಂಭವಿಸಬಹುದು. ತಾಳ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿ ತಿಳಿಯಾದೀತು.

ಕನ್ಯಾ
ಇತರರಿಗೆ ಇಂದು ಮುಕ್ತವಾಗಿ ನೆರವು ನೀಡುವಿರಿ. ಅದರಿಂದ ಎಲ್ಲರ ಮೆಚ್ಚುಗೆ ಗಳಿಸುವಿರಿ. ಆತ್ಮೀಯರ ಸಂಗದಲ್ಲಿ ಸಂತೋಷ ಪಡುವಿರಿ.

ತುಲಾ
ನೀವಿಂದು ಕೆಲವು ವಿಚಾರಗಳಲ್ಲಿ ಅಡ್ಡಿ ಆತಂಕ ಎದುರಿಸುವಿರಿ. ಆದರೆ ಅದನ್ನು ನಿಭಾಯಿಸುವಲ್ಲೂ ಯಶಸ್ಸು ಕಾಣುವಿರಿ. ಆಪ್ತರಿಂದ ನೆರವು.

ವೃಶ್ಚಿಕ
ಖಾಸಗಿ ಬದುಕಿಗೂ ಹೆಚ್ಚು ಗಮನ ಕೊಡಿ. ಅದನ್ನು ನೀವು ಇತ್ತೀಚೆಗೆ ಕಡೆಗಣಿಸುತ್ತಿದ್ದೀರಿ. ವೃತ್ತಿಯ ಒತ್ತಡದಲ್ಲೇ ಪೂರ್ಣ ಕಳೆದು ಹೋಗದಿರಿ.

ಧನು
ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಬೇಕಾದೀತು. ಇಲ್ಲವಾದರೆ ತೊಡಕಿಗೆ ಸಿಲುಕುವಿರಿ. ನಿಮ್ಮ ಸುತ್ತಲಿನವರ ನೆರವು ದೊರಕುವುದು.

ಮಕರ
ಅಶಾಂತ ಮನಸ್ಸು. ಕೆಲಸದಲ್ಲಿ ಏಕಾಗ್ರತೆ ಮೂಡದು. ಇದು ನಿಮ್ಮ ಕಾರ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಆಗಾಗ ವಿರಾಮ ಪಡೆಯಿರಿ.

ಕುಂಭ
ನೀವು ಬಯಸಿದಂತೆ ಎಲ್ಲವೂ ಸಾಗುವುದಿಲ್ಲ. ಇದರಿಂದ ಬೇಸರ. ಆದರೆ ಹತಾಶೆ ಬೇಡ.  ಮುಂದಿನ ದಿನಗಳಲ್ಲಿ ನಿಮಗೆ ಪೂರಕ ಸನ್ನಿವೇಶ ಸೃಷ್ಟಿಯಾಗಲಿದೆ.

ಮೀನ
ಸಣ್ಣ ವಿಷಯಗಳು ಮನಸ್ಸಿನ ನೆಮ್ಮದಿ ಕದಡುತ್ತವೆ. ಏನೇ ಮಾಡಿದರೂ ಬೇಗುದಿ ಕಡಿಮೆಯಾಗದು. ಧ್ಯಾನ, ಪ್ರಾರ್ಥನೆ ಸಹಕಾರಿಯಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!