ಲೋಕಸಭಾ ಚುನಾವಣೆ ಮುನ್ನ ರಾಮ ಮಂದಿರ ಲೋಕಾರ್ಪಣೆ ಬಿಜೆಪಿಯ ಗಿಮಿಕ್: ಬಂಗಾಳ ಸಿಎಂ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಮಾಡುವುದು ಬಿಜೆಪಿಯ ಗಿಮಿಕ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.

ನಾನು ಐಕ್ಯತೆಯ ಹಬ್ಬಗಳನ್ನು ನಂಬುತ್ತೇನೆ. ನ್ಯಾಯಾಲಯದ ಆದೇಶವನ್ನು ಅನುಸರಿಸಿ ಯಾರೂ ದೇವಾಲಯಕ್ಕೆ ಆಕ್ಷೇಪಿಸಿಲ್ಲ. ಆದರೆ ಬಿಜೆಪಿ ಚುನಾವಣೆಗೆ ಮುಂಚೆ ರಾಮಮಂದಿರ ಉದ್ಘಾಟನೆ ಮಾಡುತ್ತಿರುವುದು ಗಿಮಿಕ್. ನೀವು ಇತರ ಸಮುದಾಯವನ್ನು ಒಡೆಯುವ ಮತ್ತು ಕಡೆಗಣಿಸುವ ಕಾರ್ಯ ಮಾಡಬಾರದು ಹೇಳಿದ್ದಾರೆ.

‘ನಾನು ಅಲ್ಲಾಹನ ಮೇಲೆ ಪ್ರಮಾಣ ಮಾಡುತ್ತೇನೆ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ವಿಭಜನೆಗೆ ಅವಕಾಶ ನೀಡುವುದಿಲ್ಲ. ನಾವು ಬಿಜೆಪಿಗೆ ಶರಣಾಗುವುದಿಲ್ಲ ಎಂದು ಅವರು ಹೇಳಿದರು.

ನಾನು ಮಾಫಿಯಾದ ನಾಯಕಿ ಎಂದು ಕೆಲವರು ಹೇಳುತ್ತಿದ್ದಾರೆ. ಜನರು ನನ್ನ ನಾಯಕ, ನಾನು ಅವರ ಆಳು ಎಂದು ಅವರು ಪಡಿತರ ವಿತರಣೆಯಲ್ಲಿ ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿರುವ ಪಕ್ಷದ ನಾಯಕ ಶೇಖ್ ಶಜಹಾನ್ ಅವರ ಪ್ರಕರಣವನ್ನು ನೇರವಾಗಿ ಉಲ್ಲೇಖಿಸದೆ ಮಮತಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here