ಹೊಸದಿಂಗತ ಡಿಜಿಟಲ್ ಡೆಸ್ಕ್:
‘ದೇವರಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ದೇವಸ್ಥಾನದಲ್ಲಿ ಮಾತ್ರ ಇದ್ದಾನೆ ಎನ್ನುವುದನ್ನು ಒಪ್ಪಲ್ಲ. ಆತ ಎಲ್ಲರ ಮನಸಿನಲ್ಲೂ ಇದ್ದಾನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಲೇಖಕ ಡಾ. ಎಂ.ಎಸ್.ಮುತ್ತುರಾಜ್ ಅವರ ‘ಮಂಗಳವಾದ್ಯ’ ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು. ನಾರಾಯಣ ಗುರುಗಳು, ಕನಕದಾಸರು ಮತ್ತು ಬಸವಾದಿ ಶರಣರು ಮಾನವೀಯ ಮೌಲ್ಯವನ್ನು ಹೇಳಿದ್ದಾರೆ.
ದಲಿತರನ್ನು ದೇವಸ್ಥಾನದ ಒಳಗೆ ಬಿಡದಿದ್ದರೆ ಆ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿ, ನೀವೇ ದೇವಸ್ಥಾನ ಕಟ್ಟಿ, ನೀವೇ ಪೂಜೆ ಮಾಡಿ ಎಂದು ನಾರಾಯಣ ಗುರುಗಳು ಸರಳವಾದ ಉಪಾಯ ತೋರಿಸಿದ್ದಾರೆ. ದೇವರಿದ್ದಾನೆ. ಆದರೆ, ದೇವಸ್ಥಾನದಲ್ಲಿ ಮಾತ್ರ ದೇವರಿದ್ದಾನೆ ಎನ್ನುವುದು ಸರಿಯಲ್ಲ ಎಂದರು.