Thursday, January 1, 2026

ಬೇಗುಸರಾಯ್‌ನಲ್ಲಿ ನಕ್ಸಲ್ ಎನ್‌ಕೌಂಟರ್‌: ಆತನ ತಲೆಗಿತ್ತು 50 ಸಾವಿರ ಬಹುಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಬೇಗುಸರೈ ಜಿಲ್ಲೆಯಲ್ಲಿ ಪೊಲೀಸರು ಹಾಗೂ ವಿಶೇಷ ಕಾರ್ಯಪಡೆ (STF) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಬಹುಕಾಲದಿಂದ ಪರಾರಿಯಾಗಿದ್ದ ನಕ್ಸಲೀಯನೊಬ್ಬ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.

ಹತ್ಯೆಗೀಡಾದ ನಕ್ಸಲೀಯನನ್ನು ದಯಾನಂದ ಮಾಲಕರ್ ಎಂದು ಗುರುತಿಸಲಾಗಿದ್ದು, ಈತನ ಮೇಲೆ ₹50,000 ಬಹುಮಾನ ಘೋಷಿಸಲಾಗಿತ್ತು.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬೇಗುಸರೈ ಜಿಲ್ಲೆಯ ನೋನ್‌ಪುರ್ ಗ್ರಾಮದ ಬಳಿ ಮಾಲಕರ್ ಮನೆಯ ಸುತ್ತ ಭದ್ರತಾ ಪಡೆಗಳು ಮುತ್ತಿಗೆ ಹಾಕಿದವು. ಶರಣಾಗುವಂತೆ ಎಚ್ಚರಿಕೆ ನೀಡಿದರೂ, ಮಾಲಕರ್ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿದಾಳಿಯಾಗಿ ನಡೆದ ಗುಂಡಿನ ಚಕಮಕಿಯಲ್ಲಿ ಅವನು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಯಾನಂದ ಮಾಲಕರ್ ಹಲವು ನಕ್ಸಲೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು.

error: Content is protected !!