ಹೊಸದಿಗಂತ ವರದಿ, ಶಿವಮೊಗ್ಗ :
ಬಿಸಿಸಿಐ ಆಯೋಜಿಸುತ್ತಿರುವ 19ರ ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿ ಫ್ಯನಲ್ಸ್ ಪಂದ್ಯಾವಳಿ ಜ.12ರಿಂದ 15ರವರೆಗೆ ನಗರದ ಕೆಎಸ್ಸಿಎ ನವುಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂತಿಮ ಪಂದ್ಯ ಕರ್ನಾಟಕ ಮತ್ತು ಮುಂಬೈ ನಡುವೆ ನಡೆಯಲಿದೆ.
ಕರ್ನಾಟಕಜ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ ವಲಯದ ಸಂಚಾಲಕ ಹೆಚ್.ಎಸ್. ಸಂದಾನಂದ ಕ್ರೀಡಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಂತಿಮ ಪಂದ್ಯವು ನಾಲ್ಕು ದಿನಗಳ ಕಾಲ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಪಂದ್ಯ ಆರಂ‘ಗೊಂಡು, ಸಂಜೆ 4.30ರ ತನಕ ನಡೆಯುತ್ತದೆ ಎಂದರು.
ಕರ್ನಾಟಕ ತಂಡಕ್ಕೆ ಧೀರರಾಜ್ ಜೆ ಗೌಡ ನಾಯಕನಾಗಿದ್ದರೆ, ಹಾರ್ದಿಕ್ ರಾಜ್ ಉಪನಾಯಕರಾಗಿದ್ದಾರೆ. ಕೇಶವ್ ಬಜಾಜ್ ವಿಕೆಟ್ ಕೀಪರ್ ಆಗಿದ್ದಾರೆ. ಖ್ಯಾತ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಪುತ್ರ ಸುಮಿತ್ ದ್ರಾವಿಡ್ ಕೂಡ ಪಂದ್ಯದಲ್ಲಿ ಆಡಲಿದ್ದಾರೆ ಎಂದರು.
ಮುಂಬೈ ತಂಡಕ್ಕೆ ಮನಾನ್ ಭಟ್ ನಾಯಕನಾಗಿದ್ದಾರೆ. ಆಯುಷ್, ತನಿಷ್, ಪ್ರತೀಕ್ ಸೇರಿದಂತೆ 16 ಜನರ ತಂಡ ಶಿವಮೊಗ್ಗಕ್ಕೆ ಬರಲಿದೆ ಎಂದರು.
ಪ್ರಮುಖರಾದ ರಾಜೇಂದ್ರ ಕುಮಾರ್, ಕೆ.ಎಸ್.ಸುಬ್ರಹ್ಮಣ್ಯ, ಐಡಿಯಲ್ ಗೋಪಿ ಇದ್ದರು.