ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರಿನ ಮಧುಗಿರಿಯ ಹಾಸ್ಟೆಲ್ವೊಂದರಲ್ಲಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ಏಳು ತಿಂಗಳ ಗರ್ಭಿಣಿಯಾದರೂ ಹಾಸ್ಟೆಲ್ ವಾರ್ಡನ್ ಅದನ್ನು ಗಮನಿಸಿಲ್ಲ. ಕರ್ತವ್ಯಲೋಪ ಹಿನ್ನೆಲೆಯಲ್ಲಿ ವಾರ್ಡ್ನ್ನು ಅಮಾನತು ಮಾಡಲಾಗಿದೆ.
ಹೊಟ್ಟೆ ನೋವು ಎಂದು ವಿದ್ಯಾರ್ಥಿನಿ ತನ್ನ ಊರಿಗೆ ಮರಳಿದ್ದಾರೆ. ಪೋಷಕರು ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಸ್ಕ್ಯಾನಿಂಗ್ ಹಾಗೂ ಇತರ ಪರೀಕ್ಷೆಗಳ ನಂತರ ಆಕೆ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆಯಲಾಗಿದೆ. ಆಕೆ ಇದೇ ಊರಿನಲ್ಲಿ ತಮ್ಮ ಸಂಬಂಧಿಕರ ಮನೆಗೆ ಆಗಾಗ್ಗೆ ಹೋಗುತ್ತಿದ್ದಳು. ಆಕೆಯೂ ಅಪ್ರಾಪ್ತ ಬಾಲಕನೊಂದಿಗೆ ಸಂಬಂಧ ಹೊಂದಿರಬಹುದು ಎಂದು ವಾರ್ಡನ್ ಹೇಳಿದ್ದಾರೆ.
ವಿದ್ಯಾರ್ಥಿನಿ ಹೇಳಿಕೆ ಆಧರಿಸಿ ಬಾಗೇಪಲ್ಲಿ ಠಾಣೆಯಲ್ಲಿ ಆಕೆ ಗರ್ಭಿಣಿಯಾಗಲು ಕಾರಣಕರ್ತನ ವಿರುದ್ಧ ದೂರು ದಾಖಲಾಗಿದೆ. ಆತ ನನ್ನನ್ನು ಒತ್ತಾಯಿಸಿದ್ದಾನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.