ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಪರ ಪ್ರತ್ಯೇಕತಾವಾದಿ ಸಂಘಟನೆ ತೆಹ್ರೀಕ್-ಎ-ಹುರಿಯತ್ (ಟಿಇಎಚ್) ಮತ್ತು ಪ್ರತ್ಯೇಕತಾವಾದಿ ಮುಖಂಡ ಮಸರತ್ ಆಲಂ ನೇತೃತ್ವದ ಮುಸ್ಲಿಂ ಲೀಗ್ ಸಂಘಟನೆಗಳ ಆಸ್ತಿಗಳನ್ನು ಜಪ್ತಿ ಮಾಡುವಂತೆ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರ ಆಡಳಿತಕ್ಕೆ ಗುರುವಾರ ನಿರ್ದೇಶನ ನೀಡಿದೆ.
ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹಾಗೂ ಈ ಸಂಘಟನೆಗಳಿಗೆ ಹಣದ ಹರಿವನ್ನು ತಡೆಹಿಡಿಯುವಂತೆಯೂ ಸೂಚಿಸಲಾಗಿದೆ.
ಈ ಎರಡೂ ಸಂಘಟನೆಗಳನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ನಿಷೇಧಿಸಿತ್ತು.