Friday, January 2, 2026

ಎಲ್ಲಾ ಬಿಟ್ಟು ಉಪ್ಪಿನ ಮೂಟೆ ಕದಿಯುತ್ತಿರೋ ಕಳ್ಳರು! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನಾಭರಣ ಅಥವಾ ದುಬಾರಿ ವಸ್ತುಗಳನ್ನು ಕದಿಯುವುದನ್ನು ನೋಡಿದ್ದೇವೆ. ಆದರೆ ಬೆಣ್ಣೆನಗರಿಯಲ್ಲಿ ಕಳ್ಳರ ಗ್ಯಾಂಗೊಂದು ಹೋಲ್‌ಸೇಲ್​ ಕಿರಾಣಿ ಅಂಗಡಿ ಎದುರು ಇರಿಸಿದ್ದ ಉಪ್ಪಿನ ಚೀಲಗಳನ್ನು ಕದ್ದಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ.

ಹರಿಹರದ ಕೆ.ಆರ್. ನಗರ ಸೇರಿ ವಿವಿಧ ಕಿರಾಣಿ ಅಂಗಡಿಗಳ ಎದುರು ಇಟ್ಟಿದ್ದ ಉಪ್ಪಿನ ಚೀಲಗಳನ್ನು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ಕಳ್ಳರು ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಾಗಿದ್ದು ಹರಿಹರ ನಗರ ಠಾಣೆಯ ಪೊಲೀಸರು​​ ಉಪ್ಪು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆಯಿಂದ ಉಳಿದ ಬೇರೆ ಕಿರಾಣಿ ಅಂಗಡಿಯ ಮಾಲೀಕರು ಉಪ್ಪನ್ನು ಹೊರಗಿರಿಸಲು ಹಿಂದೇಟು ಹಾಕುತ್ತಿದ್ದಾರೆ.

error: Content is protected !!