ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ವಾಹನ ಚಾಲನೆ ಪರವಾನಿಗೆ ಪರಿಕ್ಷಾ ವಿಧಾನಗಳನ್ನು ಇನ್ನಷ್ಟು ಬಿಗಿಗೊಳಿಸಲು ಸರ್ಕಾರ ನಿರ್ಧರಿಸಿದೆ.
ಪ್ರಸ್ತುತ ಪರೀಕ್ಷಾ ಪ್ರಶ್ನಾಪತ್ರಿಕೆಯಲ್ಲಿ ಇರುವ ೨೦ ಪ್ರಶ್ನೆಗಳನ್ನು ೩೦ಕ್ಕೆ ಹೆಚ್ಚಿಸಲಾಗುತ್ತಿದೆ. ಇವುಗಳ ಪೈಕಿ ೧೨ ಉತ್ತರ ಸರಿಯಾಗಿದ್ದರೆ ಮಾತ್ರ ಇನ್ನು ಕಲಿಯುವವರಿಗೆ ಪರವಾನಿಗೆ ಸಿಗಲಿದೆ.
ಇದಲ್ಲದೆ ’ಹೆಚ್’ ತೆಗೆದ ಮಾತ್ರಕ್ಕೆ ಪರವಾನಿಗೆಗೆ ಅರ್ಹವಲ್ಲ. ರಿವರ್ಸ್ ತೆಗೆದು ವಾಹನ ನಿಲ್ಲಿಸಿ ತೋರಿಸಬೇಕು. ಪ್ರಾಯೋಗಿಕ ಪರೀಕ್ಷೆಯಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ರಾಜ್ಯ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ಪರವಾನಗಿ ನೀಡಲು ಮೋಟಾರು ವಾಹನ ಕಚೇರಿಗೂ ನಿರ್ಬಂಧಗಳಿವೆ. ಒಂದು ಕಚೇರಿಯಿಂದ ದಿನಕ್ಕೆ ನೀಡಲಾಗುವ ಪರವಾನಗಿಗಳ ಸಂಖ್ಯೆಯನ್ನು ಇನ್ನು ೨೦ಕ್ಕೆ ನಿಗದಿಪಡಿಸಲಾಗುತ್ತದೆ. ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದೂ ಅವರು ಹೇಳಿದ್ದಾರೆ.