ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾಕ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲಿ ಬೇಹುಗಾರಿಕಾ ಸಂಸ್ಥೆಯನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಮಾಹಿತಿ ನೀಡಿದ್ದು, ಇರಾಕ್‌ನ ಕುರ್ದಿಸ್ತಾನಲ್ಲಿ ಕ್ಷಿಪಣಿ ದಾಳಿ ನಡೆದಿದೆ ಎಂದು ಹೇಳಿದೆ.
ಇಸ್ರೇಲಿ ಬೇಹುಗಾರಿಕಾ ಸಂಸ್ಥೆಯಾದ ಮೊಸಾದ್‌ನ ಪ್ರಧಾನ ಕಚೇರಿಯೇ ದಾಳಿಯ ಟಾರ್ಗೆಟ್ ಎಂದು ಹೇಳಲಾಗಿದೆ. ಸಿರಿಯಾದ ಅಲೆಪ್ಪೊ ಗ್ರಾಮಾಂತರ ಪ್ರದೇಶದಲ್ಲಿ ಏಕಾಏಕಿ ಸ್ಫೋಟದ ಸದ್ದು ಕೇಳಿದ್ದು, ಜನರು ಭಯಭೀತರಾಗಿದ್ದಾರೆ.
ಈ ಬಗ್ಗೆ ಸಿರಿಯನ್ ಅಬ್ಸರವೇಟರಿ ಫಾರ್ ಹ್ಯೂಮನ್ ರೈಟ್ಸ್ ಮಾಹಿತಿ ನೀಡಿದ್ದು, ಮೆಡಿಟರೇನಿಯನ್ ಸಮುದ್ರದ ದಿಕ್ಕಿನಿಂದ ನಾಲ್ಕು ಕ್ಷಿಪಣಿಗಳು ಬಂದಿದ್ದವು ಎಂದು ಹೇಳಲಾಗಿದೆ.
ಕ್ಷಿಪಣಿ ದಾಳಿಯಲ್ಲಿ ಉದ್ಯಮಿ ಕುರ್ದಿಶ್, ಪೆಶ್ರಾ ದಿಜಾಯಿ ಹಾಗೂ ಅವರ ಕುಟುಂಬದವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.