ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದೇವೆ ಎಂದು ಇರಾನ್ ಹೇಳಿದೆ. ಪಾಕ್ನಲ್ಲಿರುವ ಜೈಶ್ ಅಲ್ ಅದ್ಲ್ ಉಗ್ರ ಸಂಘಟನೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿಕೆ ನೀಡಿದೆ.
ಇರಾನ್ ದಾಳಿಗೆ ಪಾಕಿಸ್ತಾನ ತತ್ತರಿಸಿದ್ದು, ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ ಎಂದು ಪಾಕ್ ಇರಾನ್ಗೆ ಬೆದರಿಕೆ ಹಾಕಿದೆ.
ಪಾಕಿಸ್ತಾನವೂ ಈ ಘಟನೆಯನ್ನು ದೃಢಪಡಿಸಿದ್ದು, ದಾಳಿಯಲ್ಲಿ ಮಕ್ಕಳು ಹಾಗೂ ಹುಡುಗಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮಾಹಿತಿ ನೀಡಿದೆ.