ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಶ್ರೀರಾಮಲಲಾ ಪ್ರಾಣಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಇದ್ದಂತೆಯೇ ಇಲ್ಲೊಬ್ಬ ಭಕ್ತ ರಾಮನ ನೈವೇದ್ಯಕ್ಕಾಗಿ ಬೃಹತ್ ಲಡ್ಡುವೊಂದನ್ನು ತಯಾರಿಸಿದ್ದಾರೆ.
ಬರೋಬ್ಬರಿ 1,265 ಕೆಜಿ ತೂಕದ ಲಡ್ಡು ತಯಾರಿಸಿದ್ದು ಹೈದರಾಬಾದ್ ಮೂಲದ ನಾಗಭೂಷಣ ರೆಡ್ಡಿ. ಇಂದು ರಾಮಮಂದಿರಕ್ಕೆ ಲಡ್ಡು ಸಮರ್ಪಣೆ ಮಾಡಲಿದ್ದಾರೆ.
ಲಡ್ಡುವನ್ನು ಡ್ರೈಫ್ರೂಟ್ಸ್ನಿಂದ ಅಲಂಕರಿಸಲಾಗಿದ್ದು, ಅದರ ಮೇಲೆ ಜೈ ಶ್ರೀರಾಮ್ ಎಂದು ಬರೆಯಲಾಗಿದೆ. ಬರೀ ಶ್ರೀರಾಮನಷ್ಟೇ ಅಲ್ಲ, ಸೀತಾಮಾತೆ, ಹನುಮಂತ, ಲಕ್ಷ್ಮಣರ ಹೆಸರಿನಲ್ಲಿಯೂ ಲಡ್ಡು ತಯಾರಿಕೆ ಮಾಡಲಾಗಿದೆ.
ದುಶಾಸನ್ ಎನ್ನುವವರು ಲಡ್ಡು ತಯಾರಿಸಿದ್ದು, ವರ್ಷಗಳ ಹಿಂದೆಯೇ ದೇಗುಲಕ್ಕೆ ಲಡ್ಡು ನೈವೇದ್ಯ ಅರ್ಪಿಸುವ ಕನಸು ಕಂಡಿದ್ದರಂತೆ.
#WATCH | Hyderabad, Telangana: A man from Hyderabad prepares a Laddu weighing 1265 kg to offer at the Ayodhya Ram Temple. The laddu will be taken to Ayodhya from Hyderabad today in a refrigerated glass box. pic.twitter.com/JPricSOoHW
— ANI (@ANI) January 17, 2024