ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ ಉದ್ಘಾಟನೆಗೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ದೇಶ-ವಿದೇಶಗಳಲ್ಲಿ ಅನೇಕ ರಾಮನ ಭಕ್ತರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ರಾಮಮಂದಿರ ಉದ್ಘಾಟನೆಯಾಗಲಿರುವ ಜನವರಿ 22 ರಂದು “ರಾಷ್ಟ್ರೀಯ ರಜಾದಿನ” ಎಂದು ಘೋಷಿಸಬೇಕೆಂದು ವಕೀಲರೊಬ್ಬರು ಒತ್ತಾಯಿಸಿದ್ದಾರೆ.
ಹೌದು, ವಕೀಲ ಘನಶ್ಯಾಮ್ ಉಪಾಧ್ಯಾಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಜನವರಿ 22 ರಂದು ರಾಷ್ಟ್ರೀಯ ರಜೆ ಘೋಷಿಸುವಂತೆ ಮನವಿ ಮಾಡಿದ್ದಾರೆ. “ಭಗವಾನ್ ಶ್ರೀರಾಮ ಲಕ್ಷಾಂತರ ಜನರ ಆರಾಧ್ಯ ದೈವ. ಅವರು ಭಾರತೀಯರ ಹೆಮ್ಮೆ ಮತ್ತು ಆದರ್ಶ. ಎಲ್ಲ ಹಿಂದೂಗಳ ಉಸಿರಲ್ಲಿ ರಾಮ ಇದ್ದಾನೆ. “ಆದ್ದರಿಂದ, ಜನವರಿ 22 ಅನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಬೇಕು” ಎಂದು ಪತ್ರದಲ್ಲಿ ತಿಳಿಸಲಾಗಿದೆ.