ಎಲ್ಲರಿಗೂ ಒಂದಲ್ಲಾ ಒಂದು ಬಾರಿ ಊಟದಲ್ಲಿ ಕೂದಲು ಸಿಕ್ಕೇ ಸಿಕ್ಕಿರುತ್ತದೆ. ಅದು ನಿಮ್ಮದೇ ಇರಬಹುದು, ಅಡುಗೆ ಮಾಡಿದವರದ್ದಾಗಿರಬಹುದು, ಆಹಾರ ಪ್ಯಾಕ್ ಮಾಡಿದವರದ್ದಾಗಿರಬಹುದು. ಹೀಗೆ ಊಟದಲ್ಲಿ ಕೂದಲು ಸಿಗೋದು ಸಾಮಾನ್ಯ. ಆದರೆ ಒಂದೇ ವ್ಯಕ್ತಿಗೆ ಪದೇ ಪದೆ ಕೂದಲು ಸಿಕ್ರೆ ಸಮಸ್ಯೆ ಇದೆ ಎಂದು ಅರ್ಥ!
ಹೌದು, ಎಲ್ಲರಿಗೂ ಊಟದಲ್ಲಿ ಕೂದಲು ಕಾಣಿಸೋದಿಲ್ಲ, ಇದು ಕೆಲವರ ಕಣ್ಣಿಗೆ ಮಾತ್ರ ಬೀಳುತ್ತದೆ. ಇದರರ್ಥ ನಿಮಗೆ ಪಿತೃದೋಷ ಇದೆ ಎಂದು. ಜ್ಯೋತಿಷ್ಯದ ಪ್ರಕಾರ ಪದೇ ಪದೆ ಊಟದಲ್ಲಿ ಕೂದಲು ಕಾಣಿಸಿದರೆ ನಿಮ್ಮ ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದರ್ಥ, ಇದರಿಂದ ನೀವು ಸಾಕಷ್ಟು ಸಮಸ್ಯೆ ಎದುರಿಸಬೇಕಾದೀತು.
ಇವುಗಳನ್ನು ಕೆಲವರು ನಂಬುತ್ತಾರೆ, ಕೆಲವರಿಗೆ ಊಟದಲ್ಲಿ ಕೂದಲು ಸಿಗುವುದು ಅನ್‌ಹೈಜೆನಿಕ್ ಎನಿಸುತ್ತದೆ. ಇನ್ನಷ್ಟು ಶುಚಿಯಾಗಿ ಅಡುಗೆ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ ಎಲ್ಲವೂ ನಂಬಿಕೆ ಮೇಲೆ ಬಿಟ್ಟಿದೆ ಅನ್ನಬಹುದಷ್ಟೇ!