ಹೊಸದಿಗಂತ ವರದಿ ಬಳ್ಳಾರಿ:
ಅಯೋಧ್ಯೆಯಲ್ಲಿ ಜ.22 ರಂದು ಬಲರಾಮ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಇಡೀ ದೇಶವೇ ಭಕ್ತಿಯಲ್ಲಿ ಮೊಳಗಿರಲಿದೆ, ಈ ಹಿನ್ನೆಲೆ ಅಂದು ರಾಜ್ಯಾದ್ಯಂತ ಸಂಪೂರ್ಣ ಮಧ್ಯ ಮಾರಾಟ ಹಾಗೂ ಮಾoಸ ಮಾರಾಟ ನಿಷೇಧಿಸಬೇಕು ಹಾಗೂ ಅಂದು ಸರಕಾರಿ ರಜೆ ಘೋಷಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಜಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಸoಸ್ಥಾಪಕ, ರಾಜ್ಯಾಧ್ಯಕ್ಷ ಕೆ. ಶ್ಯಾಮ್ ಸುಂದರ್ ಅವರು ಮಾತನಾಡಿ, ಜ.22 ರಂದು ಅಯೋಧ್ಯೆಯಲ್ಲಿ ರಾಮಲಲ್ಲ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಅಂದು, ಇಡೀ ದೇಶವೇ ಭಕ್ತಿಯಲ್ಲಿ ಮೊಳಗಿರಳಿದೆ, ಅಂದು ರಾಜ್ಯಾದ್ಯಂತ ಸಂಪೂರ್ಣ ಮದ್ಯ ಮಾರಾಟ, ಮಾoಸ ಮಾರಾಟ ನಿಷೇಧಿಸಬೇಕು, ಅಂದು ಎಲ್ಲರೂ ಕಾರ್ಯಕ್ರಮವನ್ನು ವೀಕ್ಷಿಸಲು ಸರಕಾರಿ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಭಾರತದ ವಿಶಿಷ್ಟ ವಾದ್ಯ ಸಂಗೀತ ಪ್ರಕಾರಗಳು ಝೇಂಕರಿಸಲಿವೆ, ರಾಜ್ಯದ ವೀಣೆ, ತಮಿಳುನಾಡಿನ ಮೃದಂಗ, ಛತ್ತೀಸ್ ಗಡದ ತಂಬೂರಿ ಸೇರಿದಂತೆ ಪ್ರತಿ ರಾಜ್ಯದ ವಾದ್ಯಗಳ ಮೇಳ ನಡೆಯಲಿದೆ. ಇಡೀ ವಿಶ್ವವೇ ದಾನ, ಧರ್ಮ, ಯಜ್ಞ – ಯಾಗ, ಜಪ, ತಪ, ಶ್ರೀರಾಮ ನಾಮಸ್ಮರಣೆ ಮಾಡುವ ಮೂಲಕ ಮನೆ ಮಂದಿಯಲ್ಲ ಮನೆಯಲ್ಲಿ ದೀಪಗಳನ್ನು ಹಚ್ಚಿ ದೀಪಾವಳಿ ಹಬ್ಬದಂತೆ ಅಂದು ಆಚರಿಸಲಾಗುತ್ತಿದೆ. ಅಂದು ಬಹುತೇಕ ಎಲ್ಲ ಜನರು, ಭಕ್ತಿ, ಭಾವದಲ್ಲಿ ಮಿಂದೆದ್ದು, ಶ್ರೀರಾಮನನ್ನು ಆರಾಧಿಸುತ್ತಾರೆ, ಈ ಹಿನ್ನೆಲೆ ಅಂದು ರಾಜ್ಯ ಸರ್ಕಾರ ಮದ್ಯ ಹಾಗೂ ಮಾoಸ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯರಿಸ್ವಾಮಿ, ಎಸ್. ದೇವಾನಂದ್ ಕುಮಾರ್, ಸುನೀತಾ ಬೀ, ಮಂಜುನಾಥ್, ಸುಧಾಕರ್, ಬಾಬು, ಉರುಕುಂದಾ ಉಪ್ಪಾರ್, ಡಿ. ವೆಂಕಟೇಶ, ಗೋಪಿ ಕೆ., ರಾಜೇಶ್ ಬೀ, ಪ್ರಕಾಶ್, ಧನಂಜಯ್, ಮನೋಜ್ ಇತರರಿದ್ದರು.