ಹೊಸ ದಿಗಂತ ವರದಿ, ಗದಗ:
ಅಯೋಧ್ಯೆಯಲ್ಲಿ ಜ. 22ರಂದು ಪ್ರಭು ಶ್ರೀರಾಮನ ಮಂದಿರದ ಉದ್ಘಾಟನೆ ಕಣ್ತುಂಬಿಕೊಳ್ಳಲು ಇಡೀ ಜಗತ್ತೆ ಕಾತುರದಿಂದ ಕಾಯುತ್ತಿದೆ.
ಇಡೀ ದೇಶವೆ ಶ್ರೀರಾಮ ಭಕ್ತಿಯಲ್ಲಿ ಮುಳುಗಿದ್ದು, ಶ್ರೀರಾಮನ ಭಕ್ತರು ತಮ್ಮ ಅಭಿಮಾನವನ್ನು ವಿವಿಧ ರೂಪಗಳಲ್ಲಿ ವ್ಯಕ್ತ ಪಡೆಸುತ್ತಿದ್ದಾರೆ. ಅದರಂತೆ ನಗರದ ಸಾಸನೂರ ಬೇಕರಿಯಲ್ಲಿ ಕೇಕ್‌ನಲ್ಲಿ ಶ್ರೀರಾಮ ಮಂದಿರದ ಮಾದರಿಯನ್ನು ನಿರ್ಮಾಣ ಮಾಡುವ ಮೂಲಕ ಬೇಕರಿಯ ಮಾಲಿಕ ಶರಣು ಸಾಸನೂರ ಅವರು ತಮ್ಮ ಭಕ್ತಿಯನ್ನು ಶ್ರೀರಾಮನಿಗೆ ಸಮರ್ಪಿಸಿಕೊಂಡಿದ್ದಾರೆ.