ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ ಅನಿಮಲ್ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯಲ್ಲಿ 19 ಕೆಟಗೆರಿಯಲ್ಲಿ ನಾಮಿನೇಟ್ ಆಗಿದೆ.
ಅನಿಮಲ್ ಸಿನಿಮಾದಲ್ಲಿ ಚಾನ್ಸ್ ಕೊಟ್ಟ ಸಂದೀಪ್ ರೆಡ್ಡಿ ವಂಗಾರನ್ನು ರಶ್ಮಿಕಾ ಮಂದಣ್ಣ ಹಾಡಿ ಹೊಗಳಿದ್ದಾರೆ. ಹಿಸ್ಟರಿ ಕ್ರಿಯೇಟ್ ಮಾಡಿರುವ ವಂಗಾ ಸರ್ ಈಸ್ ದಿ ಬೆಸ್ಟ್ ಎಂದಿದ್ದಾರೆ.
ರಶ್ಮಿಕಾ ಈಗಾಗಲೇ ಸಾಕಷ್ಟು ಬಾಲಿವುಡ್ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಅನಿಮಲ್‌ನಷ್ಟು ಕಲೆಕ್ಷನ್ ಯಾವ ಸಿನಿಮಾವೂ ಮಾಡಿಲ್ಲ. ಅನಿಮಲ್ ಪಾರ್ಟ್ 2 ಕೂಡ ಬರಲಿದೆ, ಅದೂ ಇದೇ ರೀತಿ ಸಕ್ಸಸ್ ಕಾಣಲಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.