ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಹೋಟೆಲ್ ಗೆ ಚಿರತೆ ನುಗ್ಗಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಕನೋಟಾ ಕ್ಯಾಸಲ್ ಹೋಟೆಲ್ ಗೆ ನುಗ್ಗಿದ ಚಿರತೆ ಕೋಣೆಯೊಂದರಲ್ಲಿ ಅಡಗಿಕೊಂಡಿದೆ.
ಚಿರತೆ ಕಂಡ ತಕ್ಷಣ ಸಿಬ್ಬಂದಿ ಕೊಠಡಿ ಬಾಗಿಲು ಮುಚ್ಚಿದ್ದಾರೆ. ಸಿಬ್ಬಂದಿಗೆ ಈ ವಿಷಯ ತಿಳಿದಾಗ, ಅಲ್ಲಿ ತಂಗಿದ್ದ ಅತಿಥಿಗಳನ್ನು ಬೇರೆ ಹೋಟೆಲ್ಗೆ ಸ್ಥಳಾಂತರಿಸಲಾಯಿತು.
ಬಳಿಕ ಹೋಟೆಲ್ ಸಿಬ್ಬಂದಿ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.