ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ಸಿಗದ ಕಾರಣ ನಾನು ರಾಮ ಮಂದಿರ ಉದ್ಘಾಟನೆಗೆ ನಾನು ಹೋಗಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
“ನಾನೂ ರಾಮನ ಅನುಯಾಯಿ”. ರಾಮಮಂದಿರ ಕಟ್ಟಲು ಹಣ ಕೂಡಿಸಿಕೊಡಲು ಅವರು ಕೇಳಿದಾಗ ನಾನು 2 ಕೋಟಿ ಹಣ ಕೂಡಿಸಿ ಕೊಟ್ಟಿದ್ದೇನೆ. ಆದರೆ, ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ಬರಲೇ ಇಲ್ಲ. ಅದಕ್ಕೇ ನಾನು ಹೋಗುತ್ತಿಲ್ಲ ಎಂದರು.
ದೇವಸ್ಥಾನ ಕಟ್ಟುವುದು ಸಂತೋಷದ ವಿಷಯ. ರಾಮಮಂದಿರ ಧರ್ಮದ ಪ್ರತೀಕ. ರಾಷ್ಟ್ರದ ಪ್ರಜ್ಞೆ ಮತ್ತು ಏಕತೆಯನ್ನು ಬಲಪಡಿಸುವುದು ಧರ್ಮದ ಉದ್ದೇಶವಾಗಿದೆ. ಆದರೆ ಶ್ರೀರಾಮ ಮಂದಿರ ವಿಚಾರದಲ್ಲಿ ಆಟದ ರಾಜಕೀಯ ಸರಿಯಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು ಮತ್ತು ರಾಜಕೀಯ ಧರ್ಮದ ಭಾಗವಾಗಬಾರದು. ನಾನು ಈಗಲೇ ಅಯೋಧ್ಯೆಗೆ ಹೋಗುತ್ತಿಲ್ಲ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಶ್ರೀರಾಮನ ದರ್ಶನಕ್ಕೆ ತೆರಳುವುದಾಗಿ ತಿಳಿಸಿದರು.