ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಮಂದಿರ ಚಳವಳಿಯ ನೇತೃತ್ವ ವಹಿಸಿದ್ದ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲಾ ಅವರ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. 96 ವರ್ಷ ವಯಸ್ಸಿನ ಅಡ್ವಾಣಿ ಅವರು ಅಯೋಧ್ಯೆಯಲ್ಲಿ ಪ್ರಸ್ತುತ 8 ಡಿಗ್ರಿ ತಾಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸಿದರು.
ಆರಂಭದಲ್ಲಿ ರಾಮಮಂದಿರ ಟ್ರಸ್ಟ್ ವಯೋಸಹಜ ಕಾರಣಗಳಿಂದ ರಾಮಮಂದಿರಕ್ಕೆ ಬರದಂತೆ ಅಡ್ವಾಣಿ ಅವರಿಗೆ ಸೂಚಿಸಿತ್ತು. ಆದರೆ, ಆ ಸಮಯದಲ್ಲಿ ಅದು ವಿವಾದಕ್ಕೀಡಾಗಿತ್ತು.
ರಾಮಮಂದಿರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಡ್ವಾಣಿ ಅವರನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಂತರ ಅವರು ಬರುವುದಾಗಿ ಹೇಳಿದರು. ಆದರೆ, ಅಯೋಧ್ಯೆಯ ಚಳಿ ತಾಳಲಾರದೆ ಅಲ್ಲಿಗೆ ಬರದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.