ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ ಅವರು ಐಸಿಸಿ ವರ್ಷದ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಟೋಯಿ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೂಡ ತಂಡದಲ್ಲಿದ್ದಾರೆ. ಸೂರ್ಯಕುಮಾರ್ ಸತತ ಎರಡನೇ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಟಿ20 ವರ್ಷದ ಕ್ರಿಕೆಟಿಗ ರೇಸ್ನಲ್ಲಿದ್ದಾರೆ.
2023ರಲ್ಲಿ ಉತ್ತಮ ರನ್ಗಳ ಮೂಲಕ ಹೆಸರು ಮಾಡಿದ್ದರು. ಶ್ರೀಲಂಕಾ ವಿರುದ್ಧ ವರ್ಷದ ಮೊದಲ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿದ್ದ ಸೂರ್ಯ, ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 5 ಮತ್ತು 112 ರನ್ ಗಳಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರು 20 ಮತ್ತು 40 ರಲ್ಲಿ ಔಟಾದರು ಮತ್ತು 44 ಎಸೆತಗಳಲ್ಲಿ 83 ರನ್ ಗಳಿಸುವ ಮೂಲಕ ತಮ್ಮ ಕೌಶಲ್ಯವನ್ನು ತೋರಿಸಿದರು. ಕಳೆದ ವರ್ಷ ರೋಹಿತ್ ಶರ್ಮಾ ಗಾಯಗೊಂಡಾಗ ಸೂರ್ಯ ಟಿ20 ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು.
ICC ಟಿ20 ವರ್ಷದ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಫಿಲ್ ಸಾಲ್ಟ್, ನಿಕೋಲಸ್ ಪುರನ್, ಮಾರ್ಕ್ ಚಾಪ್ಮನ್, ಸಿಕಂದರ್ ರಾಸ್, ಅಲ್ಪೇಶ್ ರಾಮ್ಜಾನಿ, ಮಾರ್ಕ್ ಅದೈರ್, ರವಿ ಬಿಷ್ಣೋಯ್, ರಿಚರ್ಡ್ ನಾಗರಾವ, ಅರ್ಷದೀಪ್ ಸಿಂಗ್.