ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಳಗಿನ ಜಾವ ಮೂರು ಗಂಟೆಯಿಂದಲೇ ಅಯೋಧ್ಯೆಯ ರಾಮಮಂದಿರದ ಬಳಿ ಭಕ್ತಸಾಗರ ನೆರೆದಿದೆ.
ರಾಮಲಲಾ ದರುಶನಕ್ಕಾಗಿ ದೂರದೂರುಗಳಿಂದ ಭಕ್ತರು ಆಗಮಿಸಿದ್ದು, ಊಟ ತಿಂಡಿ ಬಿಟ್ಟು ದೇಗುಲದ ಬಾಗಿಲು ತೆರೆಯಲು ಕಾದುನಿಂತಿದ್ದರು. ರಾಮಂಮಂದಿರದಲ್ಲಿ ಭಕ್ತರ ನೂಕುನುಗ್ಗಲು ಹೆಚ್ಚಾಗಿದ್ದು, ಇದೀಗ ರಾಮಮಂದಿರದ ಬಾಗಿಲನ್ನು ಮುಚ್ಚಲಾಗಿದೆ.
ಪೊಲೀಸರು ಹಾಗೂ ಸ್ಥಳೀಯ ಆಡಳಿತ ಈ ನಿರ್ಧಾರ ಕೈಗೊಂಡಿದ್ದು, ತಾತ್ಕಾಲಿಕವಾಗಿ ರಾಮಮಂದಿರದ ಬಾಗಿಲನ್ನು ಮುಚ್ಚಲಾಗಿದೆ. ಮಧ್ಯಾಹ್ನ ಎರಡು ಗಂಟೆಗೆ ಮತ್ತೆ ದೇಗುಲದ ಬಾಗಿಲನ್ನು ತೆರಯಲಾಗುತ್ತದೋ ಇಲ್ಲವೋ ಎನ್ನುವ ಮಾಹಿತಿ ಲಭ್ಯವಾಗಿಲ್ಲ.