Friday, January 2, 2026

FOOD | ಹಳ್ಳಿ ಸ್ಟೈಲ್ ಸುಟ್ಟ ಬದನೆಕಾಯಿ ಗೊಜ್ಜು ತಿಂದಿದ್ದೀರಾ?

ಹಳ್ಳಿ ಅಡುಗೆಯಲ್ಲಿ ಇರುವ ವಿಶೇಷ ರುಚಿ ಎಂದರೆ ಸುಟ್ಟ ಬದನೆಕಾಯಿ ಗೊಜ್ಜು. ಒಲೆಯ ಮೇಲೆ ಸುಟ್ಟು ತೆಗೆದ ಬದನೆಕಾಯಿಯ ಸ್ಮೋಕಿ ಫ್ಲೇವರ್, ಹಸಿ ಮಸಾಲೆಗಳ ಜೊತೆಗೆ ಬೆರೆತು ಬಾಯಲ್ಲಿ ಕರಗುವ ರುಚಿಯನ್ನು ಕೊಡುತ್ತದೆ. ಬಿಸಿ ಅನ್ನಕ್ಕೆ ಅಥವಾ ರಾಗಿ ಮುದ್ದೆಗೆ ಜೊತೆಯಾಗಿ ಈ ಗೊಜ್ಜು ಇದ್ದರೆ ಸಾಕು, ಊಟಕ್ಕೆ ಇನ್ನೇನು ಬೇಕಿಲ್ಲ.

ಬೇಕಾಗುವ ಪದಾರ್ಥಗಳು

ಬದನೆಕಾಯಿ – 2 ದೊಡ್ಡದು
ಹಸಿಮೆಣಸಿನಕಾಯಿ – 2
ಈರುಳ್ಳಿ – 1
ಬೆಳ್ಳುಳ್ಳಿ – 4–5 ಕಾಳು
ಹುಣಸೆಹಣ್ಣು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ

ಮೊದಲು ಬದನೆಕಾಯಿಯನ್ನು ನೇರ ಬೆಂಕಿಯ ಮೇಲೆ ಅಥವಾ ಗ್ಯಾಸಿನಲ್ಲಿ ಚೆನ್ನಾಗಿ ಸುಟ್ಟುಕೊಳ್ಳಿ. ಹೊರಚರ್ಮ ಸಂಪೂರ್ಣವಾಗಿ ಕಪ್ಪಾಗುವವರೆಗೆ ಸುಟ್ಟ ಬಳಿಕ ತಣ್ಣಗಾಗಲು ಬಿಡಿ. ನಂತರ ಸಿಪ್ಪೆಯನ್ನು ತೆಗದು ಒಳಗಿನ ಮೃದುವಾದ ಭಾಗವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ.

ಇದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ನುಣ್ಣಗೆ ಕುಟ್ಟಿದ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಹುಣಸೆಹಣ್ಣಿನ ನೀರನ್ನು ಸೇರಿಸಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಮೇಲಿಂದ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿದರೆ ಸುಟ್ಟ ಬದನೆಕಾಯಿ ಗೊಜ್ಜು ಸಿದ್ಧ.

error: Content is protected !!