ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಪ್ರಕರಣ: ಬಂಧಿತರಲ್ಲಿ ಓರ್ವ ಕಾಂಗ್ರೆಸ್ ಮುಖಂಡ

ಹೊಸದಿಗಂತ ವರದಿ ಕಲಬುರಗಿ:

ನಗರದ ಹೊರವಲಯದ ಕೋಟನೂರ ಡಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಬಂಧಿತ ನಾಲ್ವರಲ್ಲಿ ಓರ್ವ ಕಾಂಗ್ರೆಸ್ ಮುಖಂಡನಾಗಿದ್ದಾನೆ.

ಬಂಧಿತ ನಾಲ್ವರು ಆರೋಪಿಗಳಲ್ಲಿ ಸಂಗಮೇಶ ಪಾಟೀಲ್ (ಸಂಗಪ್ಪಾ) ಬಂಧಿತ ಕಾಂಗ್ರೆಸ್ ಪಕ್ಷದ ಮುಖಂಡನಾಗಿದ್ದಾನೆ. ಸಂಗಮೇಶ ಪಾಟೀಲ್ ಅದೇ ಕೋಟನೂರ ಗ್ರಾಮದ ನಿವಾಸಿಯಾಗಿದು, ಕಲಬುರಗಿ ದಕ್ಷಿಣ ಮತಕ್ಷೇತ್ರದ ಕೈ ಮುಖಂಡನಾಗಿದ್ದಾನೆ.

ಇದೀಗ ಕಾಂಗ್ರೆಸ್,ನಿಂದಲೇ ಗಲಾಟೆಗೆ ಪ್ಲ್ಯಾನ್ ಮಾಡಿ, ಗಲಭೆಗೆ ಸಂಚು ರೂಪಿಸಲಾಗಿದೆಯಾ ? ಎಂಬ ಅನುಮಾನ ಹುಟ್ಟಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!