ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೂ ಮುನ್ನ ಆಟಗಾರರು ಸೆಣಸುತ್ತಿದ್ದಾರೆ. ಕಿಂಗ್ ಕೊಹ್ಲಿಗೆ ಎಚ್ಚರಿಕೆ ನೀಡಿ ಒಲಿ ರಾಬಿನ್ಸನ್ ಸುದ್ದಿಯಲ್ಲಿದ್ದರು. ಇದೀಗ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್‌ಗೆ ಪ್ರಬಲ ಪ್ರತಿದಾಳಿ ನಡೆಸಿದರು. ಬುಮ್ರಾ ಬೆಂಕಿಯ ಸುದ್ದಿ ಕೇಳಿ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಮೋಸ್ಟ್ ಎಕ್ಸೈಟಿಂಗ್ ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿ ಕಳೆದ ಎಲ್ಲಾ ಸರಣಿಗಿಂತ ಹೆಚ್ಚು ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಟಾಕ್ ವಾರ್. ಟೆಸ್ಟ್ ಸರಣಿಗೆ ಚಾಲನೆ ಸಿಗಲಿದ್ದು, ಅದಕ್ಕೂ ಮುನ್ನ ಉಭಯ ದೇಶಗಳ ಆಟಗಾರರ ಮಧ್ಯೆ ಮಾತಿನ ಸಮರ ಏರ್ಪಟ್ಟಿದೆ. ಅಖಾಡಕ್ಕೆ ಧಮುಕುವ ಮುನ್ನವೇ ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ, ಇಂಗ್ಲೆಂಡ್ ಶೇಕ್ ಆಗುವ ರೀತಿಯಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.
ಜಸ್ಪ್ರೀತ್ ಬೂಮ್ರಾ ಬೌಲಿಂಗ್ ಬೆಂಕಿ ನಿಜ. ಅವರ ಬೆಂಕಿ-ಬಿರುಗಾಳಿ ಬೌಲಿಂಗ್ಗೆ ಎದುರಾಳಿ ಪಡೆ ಪತರುಗುಟ್ಟುತ್ತೆ. ಆ ಮಟ್ಟಿಗೆ ಟೆರರ್ ಬೌಲಿಂಗ್. ಇಂತಹ ಮಿಸೆಲ್ ಗನ್ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನರಸಿಂಹನ ಉಗ್ರರೂಪ ತಾಳಿದ್ದು, ಹರಿತ ಮಾತುಗಳಿಂದ ಆಂಗ್ಲರಿಗೆ ಇರಿದಿದ್ದಾರೆ.
ನನಗೂ ಕೋಪ ಬರುತ್ತದೆ. ಯಾಕೆಂದರೆ ನಾನೊಬ್ಬ ಬೌಲರ್. ಅದಕ್ಕೇ ನನಗೆ ಕೋಪ ಬರುತ್ತೆ. ಆದರೆ ನನಗೆ ಇಷ್ಟವಿಲ್ಲ. ನಾನು ಯಾರನ್ನೂ ರಂಜಿಸಲು ಬಂದಿಲ್ಲ. ವಿಕೆಟ್ ಪಡೆಯುವುದೇ ನನ್ನ ಗುರಿ ಹಾಗಾಗಿ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತೇನೆ. ನಾನು ಈ ತಾಳ್ಮೆ ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.