ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳು ಈ ಚಿತ್ರವನ್ನು “ಮೆಗಾ ಬ್ಲಾಕ್ ಬಸ್ಟರ್”, “ಸೂಪರ್ ಆಕ್ಷನ್ ಚಿತ್ರ”, “ಅತ್ಯುತ್ತಮ ಛಾಯಾಗ್ರಹಣ, ಸಾಹಸ ಮತ್ತು ನಟನೆ” ಮತ್ತು “ಮಾಸ್ಟರ್ ಪೀಸ್” ಎಂದು ಕರೆಯುತ್ತಿದ್ದಾರೆ. ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಕೂಡ ಚಿತ್ರವನ್ನು ಹೊಗಳಿದ್ದಾರೆ. ಎಕ್ಸ್ ನಲ್ಲಿ ಚಿತ್ರ ವೀಕ್ಷಿಸಿದ ಅಭಿಮಾನಿಗಳು ಮತ್ತು ವೀಕ್ಷಕರ ಪ್ರತಿಕ್ರಿಯೆ ಇಲ್ಲಿದೆ.
“ಇದು ಬ್ಲಾಕ್ಬಸ್ಟರ್ ಚಿತ್ರವಲ್ಲ, ಇದು ಮೆಗಾ ಬ್ಲಾಕ್ಬಸ್ಟರ್ ಚಿತ್ರ, ಸಾಹಸ, ನಿರ್ದೇಶನ, ದೃಶ್ಯ ಪರಿಣಾಮಗಳು, ಛಾಯಾಗ್ರಹಣ, ಹಿನ್ನೆಲೆ ಧ್ವನಿ – ಎಲ್ಲವೂ ಅದ್ಭುತವಾಗಿದೆ.”
ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, “ವಿಶಿಷ್ಟವಾದ, ನಂಬಲಾಗದ ಅನುಭವವು ಪ್ರೇಕ್ಷಕರಿಗೆ ಕಾದಿದೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಶ್ಲಾಘಿಸುವ ಚಲನಚಿತ್ರ. ಅನಿಲ್ ಕಪೂರ್, ನಟನೆ ಸ್ಪೂರ್ತಿದಾಯಕ. ಸಿದ್ಧಾರ್ಥ್ ಆನಂದ್ ನಿರ್ದೇಶನ, ಸ್ಕ್ರೀನ್ ಪ್ಲೇ, ಆಕ್ಷನ್, ಸಾಹಸಗಳು, ಮ್ಯಾಜಿಕ್ ಮಾಡಿದ್ದೀರಿ. ಚಿತ್ರ ನಿರ್ಮಾಣದ ಗುಣಮಟ್ಟ ಕೂಡ ಚೆನ್ನಾಗಿದೆ. ಸಿದ್ದಾರ್ಥ್ ಆನಂದ್ ನಿಮ್ಮ ಪ್ರತಿಭೆ ಮತ್ತು ಪ್ರಯತ್ನಗಳಿಗೆ ಒಂದು ಸಲಾಂʼʼಎಂದು ಬರೆದುಕೊಂಡಿದ್ದಾರೆ.