ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿ ಶೋಯಬ್ ಮಲಿಕ್ ನಟಿ ಸನಾ ಜಾವೇದ್ ಜೊತೆ ನಿಖಾ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬಾಂಗ್ಲಾದೇಶದ ಲೇಖಲಿ ತಸ್ಲೀಮಾ ನಸ್ರೀನ್ ಮಾತನಾಡಿದ್ದಾರೆ. ಈಗಾಗಲೇ ಮೂರನೇ ಮದುವೆ ಆಗಿರುವ ಶೋಯಬ್ ಮಲಿಕ್ ಸನಾಗೂ ಡಿವೋರ್ಸ್ ಕೊಟ್ಟು ಮತ್ತೊಬ್ಬಳನ್ನು ವರಿಸುತ್ತಾರೆ ಎಂದಿದ್ದಾರೆ.
ಮಲಿಕ್ ಹಾಗೂ ಸಾನಿಯಾ ಜೋಡಿ ಇಷ್ಟವಾಗಿತ್ತು, ಇಬ್ಬರ ಮಧ್ಯೆ ಅನ್ಯೂನ್ಯತೆ ಇತ್ತು. ಆದರೆ ಸಾನಿಯಾ ಇಷ್ಟು ಬುದ್ಧಿವಂತೆಯಾಗಿ ಯಾಕೆ ಈ ಬ್ಯಾಡ್ ಬಾಯ್‌ನ್ನು ಮದುವೆಯಾದರು? ಸನಾ ನಂತರ ಮತ್ತೊಳಬನ್ನು ಮದುವೆಯಾಗುತ್ತಾರೆ. ನಂತರ ಅವಳಿಗೂ ಡಿವೋರ್ಸ್ ಕೊಡ್ತಾರೆ ಇದು ಮುಗಿಯದ ಕಥೆ ಎಂದಿದ್ದಾರೆ.