ಹೊಸದಿಗಂತ ವರದಿ ಬಳ್ಳಾರಿ:
75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ನಗರದ ಸಂಗನಕಲ್ಲು ರಸ್ತೆಯ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರು ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಭಾರತ ಮಾತೆ ಭಾವಚಿತ್ರಕ್ಕೆ ನೆರೆದ ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ. ಎಂ. ಸತೀಶ್, ಜಿಲ್ಲಾ ಉಪಾಧ್ಯಕ್ಷರಾದ ಗಾಳಿ ಶಂಕ್ರಪ್ಪ, ವಿರೂಪಾಕ್ಷ ಗೌಡ, ಏರೆಂಗಳಿ ತಿಮ್ಮರೆಡ್ಡಿ, ಕಾರ್ಯಾಲಯ ಕಾರ್ಯದರ್ಶಿ ಗಳಾದ ಬಿ. ರಾಮಕೃಷ್ಣ, ವೀರ ಶೇಖರ್ ರೆಡ್ಡಿ, ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಅಶೋಕ್ ಕುಮಾರ್, ಸುಗುಣ, ಪುಷ್ಪಲತಾ,ಶಂಭು ಪ್ರಸಾದ್, ಐನಾಥ್ ರೆಡ್ಡಿ, ರಾಮ ಚಂದ್ರಯ್ಯ, ಶ್ರೀನಿವಾಸ್ ಪಾಟೀಲ್, ಉಮೇಶ, ವೀರನಗೌಡ, ಸಿದ್ದೇಶ್ ಉಳೂರು, ವಿ ಕೆ ಬಸಪ್ಪ, ರಾಮಚಂದ್ರಪ್ಪ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ವಿವಿಧ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.