Friday, January 2, 2026

ಶ್ರೀಲಂಕಾ ನೌಕಾಪಡೆಯಿಂದ 11 ಭಾರತೀಯ ಮೀನುಗಾರರ ಬಂಧನ: ಟ್ರಾಲರ್ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 11 ಭಾರತೀಯ ಮೀನುಗಾರರನ್ನು ಬಂಧಿಸಿ ಅವರ ಟ್ರಾಲರ್ ದೋಣಿಯನ್ನು ವಶಪಡಿಸಿಕೊಂಡಿರುವುದಾಗಿ ಶ್ರೀಲಂಕಾ ನೌಕಾಪಡೆ ಶುಕ್ರವಾರ ತಿಳಿಸಿದೆ.

ಶ್ರೀಲಂಕಾ ನೌಕಾಪಡೆಯ ವಕ್ತಾರ ಕಮಾಂಡರ್ ಬುದ್ಧಿಕ ಸಂಪತ್ ಮಾಹಿತಿ ನೀಡಿದ್ದು, ಗುರುವಾರ ರಾತ್ರಿ ಉತ್ತರ ಪ್ರಾಂತ್ಯದ ಕಾರೈಕಲ್ ಮೀನುಗಾರಿಕಾ ಬಂದರಿನಿಂದ ಸಮುದ್ರಕ್ಕೆ ಇಳಿದಿದ್ದರು. ಅಲ್ಲಿಂದ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಮೀನುಗಾರರು ಆ ಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆ ಮಾಡುತ್ತಿದ್ದರು. ಅವರಿಗೆ ಹೊರಹೋಗುವಂತೆ ಎಚ್ಚರಿಕೆ ನೀಡಿದ್ದರೂ ಸಹ, ಮೀನುಗಾರಿಕೆಯನ್ನು ಮುಂದುವರಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

error: Content is protected !!