ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ ಹತ್ತು ವರ್ಷಗಳ ಬಳಿಕ ಇದೀಗ ನದಿಗಳಿಂದ ಮರಳು ತೆಗೆಯಲು ಕೇರಳ ಸರ್ಕಾರ ಅನುಮತಿ ನೀಡಲು ಸಿದ್ಧತೆ ನಡೆಸಿದೆ.
ರಾಜ್ಯದ ನದಿಗಳಿಂದ ಮರಳುಗಾರಿಕೆ ನಿಷೇಧ ಹಿಂಪಡೆಯಲು ಕಂದಾಯ ಸಚಿವಾಲಯ ನಿರ್ಧರಿಸಿದ್ದು, ಇದೇ ಮಾರ್ಚ್ನಿಂದ ಮತ್ತೆ ಮರಳುಗಾರಿಕೆಗೆ ಅನುಮತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ರಾಜ್ಯದ ನದಿಗಳ ಮರಳು ಪ್ರಮಾಣದ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಈ ವೇಳೆ 17 ನದಿಗಳಲ್ಲಿ ಮರಳು ತೆಗೆಯಲು ಅವಕಾಶವಿರುವುದು ಕಂಡುಬಂದಿದೆ. ಈ ಅಧ್ಯಯನ ವರದಿಗಳನ್ನು ಪೂರ್ಣಗೊಳಿಸಿ ಕೇಂದ್ರ ಸೂಚನೆಯಂತೆ ಅಂತಿಮ ವರದಿ ಸಿದ್ಧಪಡಿಸಲಾಗುತ್ತಿದ್ದು, ಅದಾದ ಬಳಿಕ ಅನುಮತಿ ಪಡೆದ ನದಿಗಳಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ನೀಡಲು ನಿರ್ಧರಿಸಲಾಗಿದೆ.
ಈ ಮೂಲಕ ಕೇಂದ್ರ ಪರಿಸರ ಸಚಿವಾಲಯದ ಮಾರ್ಗಸೂಚಿಗಳಂತೆ ಕೇರಳ ನದಿ ದಂಡೆಗಳ ರಕ್ಷಣೆ ಮತ್ತು ಮರಳು ತೆಗೆಯುವ ನಿಯಂತ್ರಣ ಕಾಯ್ದೆ 2001ಕ್ಕೆ ತಿದ್ದುಪಡಿ ತರುವಲ್ಲಿ ಸಿದ್ಧತೆಗಳು ನಡೆದಿವೆ.