ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನವಾಪಿ ಮಸೀದಿ ಸ್ಥಳದಲ್ಲಿ ಪತ್ತೆಯಾಗಿರುವ ಅನೇಕ ಪ್ರಾಚೀನ ಶಾಸನಗಳಲ್ಲಿ ಕನ್ನಡ, ದೇವನಾಗರಿ, ತೆಲುಗುಗಳಲ್ಲಿರುವ ಶಾಸನಗಳೂ ಸೇರಿವೆ!
ಹಿಂದು ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಈ ಅಚ್ಚರಿಯ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ. ಮಸೀದಿಯಿರುವ ಜಾಗದಲ್ಲಿ ಒಂದು ಕಡೆ ’ಮಹಾಮುಕ್ತಿ ಮಂಟಪ’ ಎಂದು ಬರೆದಿರುವುದು ಪತ್ತೆಯಾಗಿದೆ. ಇಲ್ಲಿ ಈ ಹಿಂದೆ ದೇವಾಲಯವಿತ್ತು ಎಂಬುದಕ್ಕೆ ಇದು ಪ್ರಬಲ ಸಾಕ್ಷ್ಯವಾಗಿದೆ ಎಂದಿರುವ ಅವರು, ಇಲ್ಲಿ ರುದ್ರ, ಜನಾರ್ದನ ಹಾಗೂ ವಿಶ್ವೇಶ್ವರನ ಕುರಿತ ಶಾಸನಗಳು ದೊರೆತಿವೆ ಎಂದಿದ್ದಾರೆ.
ಏನೇನಿದೆ ವರದಿಯಲ್ಲಿ?
ಮೊಘಲ್ ದೊರೆ ಔರಂಗಜೇಬನ ಆಡಳಿತದಲ್ಲಿ ೧೭ನೇ ಶತಮಾನದಲ್ಲಿ ದೇವಸ್ಥಾನದ ಒಂದು ಭಾಗ ಕೆಡವಿ ಮಸೀದಿ ನಿರ್ಮಿಸಲಾಗಿದೆ. ಹಿಂದೆ ಕೆಡವಲಾದ ದೇವಸ್ಥಾನದ ಕಂಬಗಳನ್ನೇ ಬಳಸಿ ಮಸೀದಿ ನಿರ್ಮಾಣವಾಗಿದೆ. ಮಸೀದಿಯ ಪಶ್ಚಿಮ ಭಾಗದ ಗೋಡೆಯು ಹಿಂದು ದೇವಾಲಯದ ಭಾಗವಾಗಿತ್ತು ಎಂಬುದನ್ನು ಸುಲಭವಾಗಿ ಗುರುತಿಸಬಹುದು. ಮಸೀದಿಯ ತಳಮಹಡಿಯಲ್ಲಿ ಹಿಂದು ದೇವರ ವಿಗ್ರಹಗಳ ಅವಶೇಷಗಳು ಪತ್ತೆಯಾಗಿವೆ. ಗೋಡೆಯಲ್ಲಿ ’ಸ್ವಸ್ತಿಕ್’ ಚಿಹ್ನೆ ಕೆತ್ತಿರುವುದು ಕಂಡುಬಂದಿದೆ.