ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳುತ್ತಿದ್ದ ವೇಳೆ ಅವರ ಬೆಂಬಲ ವಾಹನದ ಟೈರ್ ಸ್ಫೋಟಗೊಂಡಿದೆ.
ವಿಜಯೇಂದ್ರ ಅವರ ಬೆಂಗಾವಲು ವಾಹನದ ಎರಡೂ ಟೈರ್ ಗಳು ಆಂಧ್ರಪ್ರದೇಶದ ಆದೋನಿ ಬಳಿಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಅದೃಷ್ಟವಶಾತ್, ಯಾವುದೇ ತೊಂದರೆಗಳಿಲ್ಲ.
ನಿನ್ನೆ ನಡೆದ ಘಟನೆ ತಡವಾಗಿ ಗೊತ್ತಾಗಿದೆ. ಬೆಂಗಾವಲು ವಾಹನದ ಟೈರ್ ಸ್ಫೋಟಗೊಂಡ ಕಾರಣ ವಿಜಯೇಂದ್ರ ಮೂರು ಗಂಟೆ ತಡವಾಗಿ ಮಂತ್ರಾಲಯ ರಾಯರ ಮಠಕ್ಕೆ ಆಗಮಿಸಿದರು.