ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ. ವಿಷ್ಣುವರ್ಧನ್ ಅವರು ಆರ್‌ಎಸ್‌ಎಸ್ ಕಾರ್ಯಕರ್ತನ ಪಾತ್ರದಲ್ಲಿ ನಟಿಸಿದ್ದಾರೆ. ಅರೇ ಅದ್ಹೇಗೆ? ಅಂತೀರಾ. ವಿಷ್ಟುದಾದಾ ಅಗಲಿ ಒಂದು ದಶಕವೇ ಆಗಿದೆ. ಅದ್ಯಾವ ಸಿನಿಮಾದಲ್ಲಿ? ಅದ್ಯಾವ ತಂತ್ರಜ್ಞಾನದಲ್ಲಿ ವಿಷ್ಣುವರ್ಧನ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ರಮ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ನಾಗರಹಾವು’ ಚಿತ್ರದ ಹೆಡ್ ಮಾಸ್ಕ್ ತಂತ್ರಜ್ಞಾನದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು.
ಈಗ ವಿಷ್ಣುದಾದಾ ಮತ್ತೊಂದು ವಿಭಿನ್ನ ಕಾರ್ಯದೊಂದಿಗೆ ಬಂದಿದ್ದಾರೆ. ಆರ್.ಎಸ್.ಎಸ್ ಕಾರ್ಯಕರ್ತನ ಗೆಟಪ್ ನಲ್ಲಿ. ಚಿತ್ರದುರ್ಗದ ಕೋಟೆಯ ಬ್ಯಾಕ್ ಡ್ರಾಪ್ ನಲ್ಲಿ ವಿಷ್ಣುವರ್ಧನ್ ಛಾಯೆಯಲ್ಲಿ ಒಂದು ಸಿನಿಮಾ ಬರ್ತಾ ಇದೆ.
ಈ ಚಿತ್ರವನ್ನು ಚಾಮಯ್ಯ S/O ರಾಮಾಚಾರಿ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಇತಿಹಾಸಕಾರ, ನಟ ಮತ್ತು ಚಲನಚಿತ್ರ ನಿರ್ದೇಶಕರೂ ಆಗಿರುವ ಪಲಕ್ಕಿ ರಾಮಕೃಷ್ಣ ನಿರ್ದೇಶಿಸಿದ್ದಾರೆ. ಚಾಮಯ್ಯ S/O ರಾಮಾಚಾರಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಫಸ್ಟ್ ಲುಕ್ ಮುಗಿದಿದ್ದು, ವಿಷ್ಣುವರ್ಧನ್ ಅಭಿಮಾನಿಗಳೆಲ್ಲರಿಗೂ ಖುಷಿ ನೀಡಲಿದೆ ಎಂದು ನಿರ್ದೇಶಕ ಪಾಲಕ್ಕಿ ರಾಮಕೃಷ್ಣ ತಿಳಿಸಿದ್ದಾರೆ