ಲಕ್ಷದ್ವೀಪ ಬಳಿ ಅಪಾಯಕ್ಕೆ ಸಿಲುಕಿದ ಫಿಶ್ಶಿಂಗ್ ಬೋಟ್: ಆಪದ್ಭಾಂಧವನಾದ ಕೋಸ್ಟ್ ಗಾರ್ಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಲಕ್ಷದ್ವೀಪ ಬಳಿ ಎಂಜಿನ್ ದೋಷದಿಂದ ಅಪಾಯಕ್ಕೆ ಸಿಲುಕಿದ್ದ ಬೋಟನ್ನು ಭಾರತೀಯ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ವಾಪಸ್ ದಡ ಸೇರಿಸಿದೆ.
ಈ ಬಗ್ಗೆ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ’ಅರುಲ್ ಮಾತಾ’ ಎಂಬ ಹೆಸರಿನ ಈ ಮೀನುಗಾರಿಕಾ ಬೋಟನ್ನು ಈಗ ಮಿನಿಕಾಯ್ ದ್ವೀಪಕ್ಕೆ ಕರೆತರಲಾಗಿದೆ ಎಂದು ಹೇಳಿದೆ.
ಬೋಟ್‌ನಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ. ಮಿನಿಕಾಯ್ ದ್ವೀಪದಿಂದ ನೈಋತ್ಯಕ್ಕೆ ಸುಮಾರು 92 ಕಿ.ಮೀ ದೂರದಲ್ಲಿ ಮೀನುಗಾರಿಕಾ ಹಡಗು ಅಪಾಯಕ್ಕೆ ಸಿಲುಕಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!