ಜನಪ್ರಿಯತೆ ಕಳೆದುಕೊಂಡ ರಾಜ್ಯ ಕಾಂಗ್ರೆಸ್ ಸರ್ಕಾರ: ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ

ಹೊಸ ದಿಗಂತ ವರದಿ, ರಾಯಚೂರು :

ಅಧಿಕಾರಕ್ಕೆ ಬಂದು ಐದಾರು ತಿಂಗಳುಗಳಲ್ಲಿ ಜನಪ್ರಿಯತೆಯನ್ನು ಕಳೆದುಕೊಂಡು ಸರ್ಕಾರ ದೇಶದ ಇತಿಹಾಸದಲ್ಲಿ ಯಾವುದಾದರೂ ಇದ್ದರೆ ಅದು ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಯೋಜನೆಗಳ ಅನುಷ್ಠಾನದಲ್ಲಿ ವೈಫಲ್ಯ, ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದು 8 ತಿಂಗಳುಗಳಾಗಿದ್ದರೂ ಮನೆ ಮನೆಗೆ ತಲುಪಿಸುವಲ್ಲಿ ಸರ್ಕಾರ ಸಂಪೂರ್ಣ ಸರ್ಕಾರ ವೈಫಲ್ಯ ಕಂಡಿದೆ. ಆದರೆ ಮಾಧ್ಯಮಗಳಲ್ಲಿ ಹೆಚ್ಚು ಜಾಹೀರಾತುಗಳನ್ನು ನೀಡಿ ವಿನಾಕಾರಣ ಪ್ರಚಾರ ಪಡೆಯುವ ಮೂಲಕ ಜನತೆಗೆ ಮೋಸ ಮಾಡುತ್ತಿರುವುದು ನಮ್ಮ ಎದುರಿಗಿವೆ ಎಂದರು.

ನಾವು ವಿರೋಧ ಪಕ್ಷದರಾಗಿ ಟೀಕೆ ಮಾಡಬೇಕೆನ್ನುವ ಕಾರಣಕ್ಕೆ ಟೀಕೆಗಳನ್ನು ಮಾಡುತ್ತಿಲ್ಲ. ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಆಡಳಿತವನ್ನು ಹಳಿಗೆ ತರುವುದಕ್ಕೆ ಆರು ತಿಂಗಳುಗಳಾದರೂ ಬೇಕಾಗುತ್ತದೆ. ಇವರು ಅಧಿಕಾರಕ್ಕೆ ಬಂದು 8 ತಿಂಗಳು ಗತಿಸಿದರೂ ಒಂದೇ ಒಂದು ಜನಪರ ನೂತನ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ವಿಫಲರಾಗಿರುವುದನ್ನು ಕಂಡು ನಾವು ಟೀಕೆಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಮೊಘಲರ ಅಟ್ಟಹಾಸಕ್ಕೆ ರಾಮ ಮಂದಿರ ಹಾಳಾಗಿ ಕಳೆದ ಐದನೂರು ವರ್ಷಗಳ ಸುಧೀರ್ಘ ಹೋರಾಟವನ್ನು ಕಂಡು ಈಗ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾರದೆ ಕಾಂಗ್ರೆಸ್ಸಿನವರು ಹಿಂದುಗಳ ಭಾವನೆಗಳನ್ನು ವಿರೋಧಿಸುವ ಕೆಲಸವನ್ನು ಮಾಡಿದ್ದಾರೆ. ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವುದಕ್ಕೆ ಕಾಂಗ್ರೆಸ್ ಸರ್ಕಾರ ಕಿಂಚಿತ್ತು ಹಿಂದೇಟು ಹಾಕುವುದಿಲ್ಲ ಎನ್ನುವದಕ್ಕೆ ಹುಬ್ಬಳ್ಳಿ ಶ್ರೀಕಾಂತ ಪೂಜಾರಿಯವರ ಬಂಧನವೇ ಸಾಕ್ಷಿ ಎಂದರು.

ಮಂಡ್ಯಾದ ಕೆರೆಗೋಡು ಗ್ರಾ.ಪಂದಲ್ಲಿ ನಿರ್ಣಯವ್ನನು ಮಾಡಿ 108 ಅಡಿ ಎತ್ತರದ ಧ್ವಜ ಸ್ಥಂಭವನ್ನು ಹಾಕಿ ಧ್ವಜಾರೋಹಣವನ್ನು ಮಾಡಿದ್ದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಿಟ್ಟು ಧ್ವಜವನ್ನು ಇಳಿಸುವ ದುಸ್ಸಾಹವನ್ನು ಮಾಡುವ ಮೂಲಕ ತನ್ನ ಗುಂಡಾ ಪ್ರವೃತ್ತಿಯನ್ನು ಪ್ರದರ್ಶಿಸಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!