ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ನ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
ಈವರೆಗೂ ಗರೀಬಿ ಹಠಾವೋ ಎನ್ನುವ ಘೋಷಣೆಯನ್ನಷ್ಟೇ ಕೇಳಿದ್ದೆವೆ. ಆದರೆ ಇದೀಗ ಮೊದಲ ಬಾರಿಗೆ ಬಡತನವನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸಲಾಗಿದೆ. ಇದೆಲ್ಲವೂ ಕೇಂದ್ರ ಸರ್ಕಾರ ನಡೆದುಬಂದ ಹಾದಿಯಾಗಿದೆ ಎಂದಿದ್ದಾರೆ.
ಕಳೆದ ವರ್ಷ ಭಾರತ ಅನೇಕ ಸಾಧನೆಗಳನ್ನು ಮಾಡಿದೆ, ಯಶಸ್ಸುಗಳನ್ನು ಕಂಡಿದೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು, ಜೊತೆಗೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಭಾರತವಾಗಿದೆ. ಏಷ್ಯನ್ ಕ್ರೀಡಾಕೂಟದಲ್ಲಿ 100ಕ್ಕೂ ಹೆಚ್ಚು ಪದಕಗಳು, ಭಾರತದಲ್ಲಿ ಅಟಲ್ ಸುರಂಗ ಎಲ್ಲವೂ ದೇಶವನ್ನು ಒಂದು ಹೆಜ್ಜೆ ಮುಂದೆ ಹೋಗುವಂತೆ ಮಾಡಿದೆ ಎಂದು ಹೇಳಿದ್ದಾರೆ.
#WATCH | ‘Make in India’ and ‘Aatmanirbhar Bharat’ have become our strengths, says President Droupadi Murmu.
The President also lauds defence production crossing the Rs 1 lakh crore mark. pic.twitter.com/KDkEKZZ3kA
— ANI (@ANI) January 31, 2024