ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಇದರಿಂದಾಗಿ ಕಾರಿನ ಹಿಂಬದಿಯ ಗಾಜು ಒಡೆದುಹೋಗಿದೆ. ಅಹಿತಕರ ಘಟನೆಯಲ್ಲಿ ಅದೃಷ್ಟವಶಾತ್ ರಾಹುಲ್ ಗಾಂಧಿ ಗಾಯಗೊಂಡಿಲ್ಲ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದು, ಯಾರೋ ಕಿಡಿಗೇಡಿಗಳು ರಾಗಾ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಮಧ್ಯಾಹ್ನಕ್ಕೆ ಪಶ್ಚಿಮ ಬಂಗಾಳ ತಲುಪಬೇಕೆಂದು ಯೋಜನೆ ಹಾಕಿಕೊಂಡಿದ್ದೆವು. ಆದರೆ ಈ ಘಟನೆಯಿಂದಾಗಿ ಸಮಯ ವಿಳಂಬವಾಗಲಿದೆ ಎಂದಿದ್ದಾರೆ.